ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಲದಲ್ಲೇ ಅವರೇ ಮಹಿಳಾ ಅಧಿಕಾರಿಗೆ ಹೆದರಿಸಿದ್ದರು ಎಂದು ಸಚಿವ ಎಚ್.ಸಿ.ಮಹದೇವಪ್ಪ ಅವರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರ ಅಧಿಕಾರದಲ್ಲಿ ಯಾವ ಅಧಿಕಾರಿಗಳಿಗೆ ಏನು ಆಗಿದೆ ಎಂದು ದಾಖಲೆ ತೆಗೆದು ನೋಡಲಿ ಆಗ ಗೊತ್ತಾಗುತ್ತದೆ. ಯಾರೇ ಆದರೂ ಆ ರೀತಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ 7.6 ವರ್ಷ ಸಿಎಂ ಆಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅದು ಯಾವ ರೀತಿ ಅವರು ಲೀಸ್ ಬೇಸ್ಡ್ ಸಿಎಂ ಆಗ್ತಾರೆ. ಕುಮಾರಸ್ವಾಮಿ ಎಷ್ಟು ವರ್ಷ ಸಿಎಂ ಆಗಿ ಕೆಲಸ ನಿರ್ವಹಿಸಿದ್ದರು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ 7.6 ವರ್ಷ ಸಿಎಂ ಆಗಿ ದಾಖಲೆ ಮಾಡಿದ್ದಾರೆ. ಲೀಸ್ ಎಂದರೆ ಮೂರು ನಾಲ್ಕು ತಿಂಗಳು ಅಷ್ಟೇ ಇವೆಲ್ಲವೂ ಹಾಸ್ಯಾಸ್ಪದ ಮಾತುಗಳು ಅಷ್ಟೇ ಎಂದು ಹೇಳಿದರು.





