ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಿವಿಧ ಬಸ್‌ಗಳಲ್ಲಿ ನಗರ ರಹಿತ ವಹೀವಾಟನ್ನು ಪ್ರಾಯೋಗಿಕವಾಗಿ ಆರಂಭಿಸಿತ್ತು. ಇದೀಗ ಕ್ಯಾಶ್‌ಲೆಸ್ ಮಷಿನ್ ಬಳಕೆಯನ್ನು ಆರಂಭಿಸಲು ಚಿಂತನೆ ನಡೆಸಿದೆ.
ಒಂದಷ್ಟು ವಿಳಂಬದ ಬಳಿಕ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಗರ ರಹಿತ ಸೌಲಭ್ಯವೊಂದು ನವೆಂಬರ್ ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿ ನೀವು ಟಿಕೆಟ್ ಹಣ ಪಾವತಿಸಬಹುದಾಗಿದೆ. ಈ ನಗದು ರಹಿತ ವ್ಯವಸ್ಥೆಯು ನವೆಂಬರ್‌ನಿಂದ ರಾಜ್ಯದ 8000ಕ್ಕೂ ಅಧಿಕ ಬಸ್‌ಗಳಲ್ಲಿ ಅಳವಡಿಕೆ ಆಗಲಿದೆ.
ಇದರಿಂದ ಚಿಲ್ಲರೆ ಸಮಸ್ಯೆ ಜೊತೆಗೆ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





