ಮೈಸೂರು : ಹೊಸ ವಿನ್ಯಾಸದ ಕರ್ನಾಟಕ ಸಾರಿಗೆಯ ಅಶ್ವಮೇಧ ಬಸ್ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು ವಿಭಾಗದ ವತಿಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ೨೦ ನೂತನ ಅಶ್ವಮೇಧ ಕ್ಲಾಸಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಇಂದಿನಿಂದ ಸಂಚಾರ ಆರಂಭಿಸಿದ ಅಶ್ವಮೇಧ ಕ್ಲಾಸಿಕ್ ಬಸ್ಸುಗಳಲ್ಲಿ ಮೈಸೂರು-ಬೆಂಗಳೂರು ನಡುವೆ ೩ ಬಸ್, ನಂಜನಗೂಡು-ಮೈಸೂರು-ಬೆಂಗಳೂರು ೩ ಬಸ್, ನಂಜನಗೂಡು-ಟಿ.ನರಸೀಪುರ-ಬೆಂಗಳೂರಿಗೆ ೭ ಬಸ್ಸು, ಹೆಚ್.ಡಿ.ಕೋಟೆ-ಬೆಂಗಳೂರಿಗೆ ೨ ಬಸ್, ಹುಣಸೂರು-ಬೆಂಗಳೂರಿಗೆ ೨ ಬಸ್, ಹಾಸನ-ಬೆಂಗಳೂರಿಗೆ ೨ ಬಸ್ ಹಾಗೂ ಮೈಸೂರು-ವಿರಾಜಪೇಟೆ ನಡುವೆ ಒಂದು ಬಸ್ ಸಂಚರಿಸಲಿದೆ.
ಈ ವೇಳೆ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು





