Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯಿಂದ ಹೊಸ ವೋಲ್ವೋ ಬಸ್ ಪರಿವೀಕ್ಷಣೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ೯೬೦೦ ವೋಲ್ವೋ ಮಲ್ಟಿಯಾಕ್ಸಲ್‌ ಸೀಟರ್‌ ಪ್ರೋಟೋ ಟೈಪ್‌ ಬಸ್‌ ಅನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಇಂದು ಪರಿವೀಕ್ಷಣೆ  ನಡೆಸಿದರು. ಶೀಘ್ರದಲ್ಲೆ ಈ ಹೊಸ ವೋಲ್ವೋ ಬಸ್‌ ರಸ್ತೆಗೆ ಇಳಿಯಲಿದೆ.

ಸಚಿವ ರಾಮಲಿಂಗಾರೆಡ್ಡಿ ಬಸ್‌ ಅನ್ನು ವೀಕ್ಷಿಸಿ , ಕರ್ನಾಟಕವು ವಿವಿಧ  ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸೇರ್ಪಡೆಗೊಳಿಸುತ್ತಿರುವುದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಸ್‌ ಶಕ್ತಿಶಾಲಿ ಹ್ಯಾಲೊಜೆನ್‌ ಹೆಡ್‌ ಲೈಟ್ಗಳು ಮತ್ತು ಡೇ ರನ್ನಿಂಗ್‌ ಲೈಟ್‌ ಗಳೊಂದಿಗೆ ಹೊಸ ಪ್ಲಸ್‌ ಇಂಟೀರಿಯರ್ಸ್‌ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್‌ ವಿನ್ಯಾಸ ಹೊಂದಿರುವುದರಿಂದ ಕಣ್ಣು ಕುಕ್ಕುವ ಸೌಂದರ್ಯ ಹೊಂದಿದೆ. ಅಲ್ಲದೆ ಇದು ಏರೋಡೈನಾಮಿಕ್‌ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನವಾದ ತಂತ್ರಗಾರಿಕೆಯಿಂದ ಸುಧಾರಿತ ಇಂಜಿನ್‌ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್‌ ಕೆಎಂಪಿಎಲ್‌ ನೀಡುತ್ತದೆ.

ಈ ಬಸ್‌ ಉದ್ದದಲ್ಲಿ ಶೇ ೩.೫ ಹೆಚ್ಚಳ ಇರುವುದರಿಂದ ಸಲೂನ್‌ ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಕೂಡ ಹೆಚ್ಚಾಗಿದೆ.  ಅಲ್ಲದೆ ಎತ್ತರದಲ್ಲಿ ಶೇ.೫.೬ ರಷ್ಟು ಹೆಚ್ಚಳವಿರುವುದರಿಂದ ಹೆಚ್ಚಿನ ಹೆಡ್‌ ರೂಂ ಇರುತ್ತದೆ. ಅಲ್ಲದೆ ವಿಶಾಲ ಲಗೇಜ್‌ ಸ್ಥಳಾವಕಾಶವಿದ್ದು, ಶೇ ೨೦ ರಷ್ಟು ಹೆಚ್ಚಿನ ಲಗ್ಗೇಜ್‌ ಇಡುವ ಸೌಲಭ್ಯ ವಿರುತ್ತದೆ. ಇನ್ನುವಿಂಡ್‌ ಶೀಲ್ಡ್‌ ಗಾಜು ಶೇ ೯.೫ ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್‌ ಸ್ಪಾಟ್‌ ಅನ್ನು ಕಡಿಮೆ ಮಾಡುತ್ತದೆ. ಇಷ್ಟೆ ಅಲ್ಲದೆ USB, ಚಾರ್ಜಿಂಗ್‌ ಪಾಯಿಂಟ್‌ ಸೇರಿ ಇನ್ನ ಸಾಕಷ್ಟು ಸೌಕರ್ಯಗಳನ್ನ  ಈ ಬಸ್‌ ನಲ್ಲಿ ಸಿಗುತ್ತದೆ.

 

Tags: