ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರಿನಿಂದ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳ ಮಹಾನಗರಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಪ್ರತಿಷ್ಠಿತ ಬಸ್‍ಗಳ ದರದಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದೆ.
ಸೋಮವಾರದಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಆಯ್ದ ಮಾರ್ಗಗಳಲ್ಲಿ ಸಂಚರಿಸುವ ಪ್ರತಿಷ್ಠಿತ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್‍ಗಳ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ. ದೂರದ ಸ್ಥಳಕ್ಕೆ ಪ್ರಯಾಣಿಸುವವರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲ ಆಗಲಿದೆ.
ಬಹು ಮಾರ್ಗಗಳಲ್ಲಿ ತನ್ನ ಹಲವಾರು ಪ್ರೀಮಿಯಂ ಬಸ್ ಸೇವೆಗಳ ದರವನ್ನು ಶೇ. 5 ರಿಂದ ಶೇ.15 ರಷ್ಟು ಕಡಿಮೆ ಮಾಡಿದೆ.
ಏಪ್ರಿಲ್ ನಿಂದ ಜೂನ್ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ನಂತಹ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎರ್‍ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು 10-15% ರಷ್ಟು ಹೆಚ್ಚಿಸುತ್ತದೆ. ಆದ್ರೆ ಇದೀಗ ಆಫ್ ಸೀಸನ್ ಸಮಯದಲ್ಲಿ ಬಸ್ ಟಿಕೆಟ್ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್ ಆಫರ್ ನೀಡುತ್ತಿದೆ.
ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು,. ಜನವರಿ.05 ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ. ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಸಾರಿಗೆ ಬಸ್‌ಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಆಫರ್ ನೀಡಲಾಗುತ್ತದೆ.
ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ ಮಾರ್ಗಗಳ ಬಸ್‍ಗಳ ಟಿಕೆಟ್ ದರದಲ್ಲಿ ಶೇಕಡ 5 ರಿಂದ 15 ರವರೆಗೆ ರಿಯಾಯಿತಿ ನೀಡಲು ನಿಗಮ ನಿರ್ಧರಿಸಿದೆ.





