ಬೆಂಗಳೂರು: ಕಾರ್ತೀಕ ಮಾಸದಲ್ಲಿ ಹೆಚ್ಚು ಜನರು ಶಬರಿಮಲೆಗೆ ಯಾತ್ರೆಗೆ ತೆರಳುತ್ತಾರೆ. ಸಾಮಾನ್ಯವಾಗಿ ಟ್ಯಾಕ್ಸಿ ಅಥವ ಟೆಂಪೋ ಟ್ರಾವೆಲರ್ ಮಾಡಿಕೊಂಡು ಯಾತ್ರೆಗೆ ತೆರಳುತ್ತಾರೆ. ಶಬರಿಮಲೆ ಸೀಸನ್‌ನಲ್ಲಿ ಎಲ್ಲಾ ಟ್ರಾವಲ್ಸ್‌ಗಳು ಫುಲ್ ಆಗಿ ಯಾತ್ರಿಗಳಿಗೆ ಸಮಸ್ಯೆ ಉಂಟಾಗುವುದು ಸರ್ವೇ ಸಾಮಾನ್ಯ.
ಆದರೆ ಇನ್ನು ಆತಂಕ ಪಡುವ ಅಗತ್ಯವಿಲ್ಲ. ಶಬರಿಮಲೆಗೆ ತೆರಳುವ ಯಾತ್ರಿಗಳಿಗೆ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್ ಸೇವೆ ಪ್ರಾರಂಭ ಮಾಡಿದೆ. ಡಿಸೆಂಬರ್ ೧ರಿಂದ ಸೇವೆ ಪ್ರಾರಂಭವಾಗಲಿದ್ದು, ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ ೧.೩೦ಕ್ಕೆ ಹೊರಟು ಮರುದಿನ ಬೆಳಗ್ಗೆ ೬.೪೫ಕ್ಕೆ ಗಂಟೆಗೆ ಕೇರಳದ ನಿಲ್ಕಲ್ ತಲುಪಲಿದೆ. ಮತ್ತೆ ಅದೇ ದಿನ ಸಂಜೆ ೬ ಗಂಟೆಗೆ ನಿಲ್ಕಲ್‌ನಿಂದ ಹೊಡಲಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.





