ಬೆಂಗಳೂರು : ಕೇರಳದ ಕ್ಯಾಲಿಕಟ್ ನಿಂದ ಬೆಂಗಳೂರಿಗೆ ಬರ್ತಿದ್ದ ಎಸಿ ಸ್ಲೀಪರ್ ಬಸ್ ಬಿಡದಿ ಬಳಿ ಅಪಘಾತವಾಗಿದ್ದು, ಘಟನೆಯಲ್ಲಿ 20 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಬೆಳಗಿನ ಜಾವ 5.30 ರ ಸುಮಾರಿಗೆ ಘಟನೆ ನಡೆದಿದ್ದು, ಡಿವೈಡರ್ ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಗೆ ಬಸ್ ಹೋಗಿದೆ. ಅದೃಷ್ಟವಶಾತ್ ಎದುರುಬದಿಯಲ್ಲಿ ಯಾವುದೇ ವಾಹನಗಳು ಬರದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಡ್ರೈವರ್ ನಿದ್ದೆ ಮಾಡಿರೊ ಹಿನ್ನೆಲೆ ಅಪಘಾತ ಶಂಕೆ ವ್ಯಕ್ತವಾಗಿದ್ದು, ಗಾಯಗಳಾಗಿದ್ದ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.