ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ, ಆಡಳಿತ ಅನುಭವ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರಾಗಿರಬೇಕು. ವಿಶ್ವವಿದ್ಯಾಲಯದ ಧ್ಯೇಯ ಸಾಧನೆಗೆ ಕೊಡುಗೆ ನೀಡುವ ಶೈಕ್ಷಣಿಕ ನಾಯಕತ್ವ ಹೊಂದಿರುವವರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಅಭ್ಯರ್ಥಿಗಳು 1992ರ ನಿಯಮಾವಳಿ ಪ್ರಕಾರ ನಿಗದಿಪಡಿಸಿದ ಅರ್ಹತೆಗಳನ್ನು ಹೊಂದಿರಬೇಕು. ಅಧ್ಯಾಪನ, ಸಂಶೋಧನೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಅನುಭವ ಇರಬೇಕೆಂದು ಸೂಚಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳು www.ksoumysuru.ac.in ವೆಬ್ ಸೈಟ್ ನಲ್ಲಿ ಲಭ್ಯವಿವೆ. ಭರ್ತಿಯಾದ ಅರ್ಜಿಗಳನ್ನು ‘ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಪಿ.ಬಿ. ನಂ. 5033, ರಾಜಭವನ, ಬೆಂಗಳೂರು-560001’ ವಿಳಾಸಕ್ಕೆ ಕಳುಹಿಸಬೇಕು.
ಮೇ 10 ಸಂಜೆ 5.30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದ್ದು, ಜೊತೆಗೆ ಅರ್ಜಿಯ ಸಾಫ್ಟ್ ಕಾಪಿಯನ್ನು us.university.rb@karnataka.gov.in ಇಮೇಲ್‌ಗೆ ಕಳುಹಿಸುವಂತೆ ಸೂಚಿಸಲಾಗಿದೆ.




