Mysore
23
clear sky

Social Media

ಭಾನುವಾರ, 12 ಏಪ್ರಿಲ 2026
Light
Dark

ಕೈಯಲ್ಲಿ ಡೆತ್‌ನೋಟ್‌ ಹಿಡಿದು ಆತ್ಮಹತ್ಯೆಗೆ ಶರಣಾದ KSDL ಅಧಿಕಾರಿ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ಈ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (KSDL) ಅಧಿಕಾರಿ ಅಮೃತ್‌ ಶಿರಿಯೂರ್‌ ಎಂಬುವವರು ಕೈಯಲ್ಲಿ ಡೆತ್‌ನೋಟ್ ಹಿಡಿದುಕೊಂಡು‌ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕೆಎಸ್‌ಡಿಎಲ್‌ ಮೆಟಿರಿಯಲ್‌ ವಿಭಾಗದಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಅಮೃತ್‌ ಶಿರಿಯೂರ್‌ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ತಂದೆಗೆ ಒಳ್ಳೆಯ ಮಗ ಆಗಲಿಲ್ಲ. ಹೆಂಡತಿಗೆ ಒಳ್ಳೆಯ ಗಂಡ ಕೂಡ ಆಗಲಿಲ್ಲ ಎಂದು ಉಲ್ಲೇಖಿಸಿರುವ ಅಮೃತ್‌ ಸಿರಿಯೂರ್‌ ಅವರು, ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಮೃತ್‌ ಸಿರಿಯೂರ್‌ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:
error: Content is protected !!