ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಕೋಗಿಲು ಲೇಟ್‍ನ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನ ಸಮಿತಿಯನ್ನು ರಚಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು, ಏಳು ಮಂದಿ ಸದಸ್ಯರ ನೇತೃತ್ವದಲ್ಲಿ ಸತ್ಯಶೋಧನ ಸಮಿತಿಯನ್ನು ರಚಿಸಿದ್ದು, ಒಂದು ವಾರದೊಳಗೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ.
ಯಲಹಂಕದ ಕೋಗಿಲು ಲೇಔಟ್ ಬಳಿ ಇರುವ ಫಕೀರ್ ಕಾಲೋನಿ ವಾಸಿಂ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆಂಬ ಕಾರಣ ನೀಡಿ ಸ್ಥಳೀಯ ಆಡಳಿತ ತೆರವು ಮಾಡಿತ್ತು.
ಈ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡಬೇಕೆಂದು ವಿಜಯೇಂದ್ರ ಅವರು ಸಮಿತಿಗೆ ನಿರ್ದೇಶನ ನೀಡಿದ್ದಾರೆ.
ಸತ್ಯಶೋಧನ ಸಮಿತಿ ಸದಸ್ಯರು:
ಎಸ್.ಆರ್.ವಿಶ್ವನಾಥ್- ಶಾಸಕರು, ಯಲಹಂಕ
ಎಸ್.ಮುನಿರಾಜು – ಶಾಸಕರು, ದಾಸರಹಳ್ಳಿ
ಕೆ.ಎಸ್.ನವೀನ್- ವಿಧಾನಪರಿಷತ್ ಸದಸ್ಯರು
ಮಾಳವಿಕಾ ಅವಿನಾಶ್- ರಾಜ್ಯ ಬಿಜೆಪಿ ಉಪಾಧ್ಯಕ್ಷರು
ರಮೇಶ್ ಗೌಡ- ರಾಜ್ಯ ಕಾರ್ಯದರ್ಶಿ
ಎಸ್.ಹರೀಶ್- ಜಿಲ್ಲಾಧ್ಯಕ್ಷರು ಬೆಂಗಳೂರು ಉತ್ತರ
ಭಾಸ್ಕರ್ ರಾವ್- ನಿವೃತ್ತ ಐಪಿಎಸ್ ಅಧಿಕಾರಿ





