Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೆ.ಆರ್ ನಗರ ಮಹಿಳೆ ಕಿಡ್ನ್ಯಾಪ್ ಕೇಸ್ ನ ತನಿಖೆ ಅಂತಿಮ ಹಂತಕ್ಕೆ ; ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ

ಬೆಂಗಳೂರು : ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್‌ ಪ್ರಕರಣ ಸಂಬಂಧ ತನಿಖೆ ಪೂರ್ಣ ಹಂತ ತಲುಪಿದ್ದು, ಈಗಾಗಲೇ ೧೦೦ಕ್ಕೂ ಹೆಚ್ಚು ಸಾಕ್ಷ್ಯಗಳನ್ನ ಕಲೆಹಾಕಲಾಗಿದೆ. ಅಲ್ಲದೆ ಎಸ್‌ ಐಟಿ ಅಧಿಕಾರಿಗಳು ಈ ಪ್ರಕರಣ ಸಂಬಂಧ ಚಾರ್ಜ್‌ ಶೀಟ್‌ ಸಲ್ಲಿಸಲು ತಯಾರಿ ಕೂಡ ನಡೆಸಿದ್ದಾರೆ.

ಮಹಿಳೆ ಕಿಡ್ನ್ಯಾಪ್‌ ಪ್ರಕರಣ ಸಂಬಂಧ ಕೆ.ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಎಸ್‌ ಐಟಿಗೆ ವಹಿಸಲಾಯಿತು. ಈ ಸಂಬಂಧವಾಗಿ ರೇವಣ್ಣ ಸೇರಿದಂತೆ ೮ ಜನರನ್ನ SIT ಕೂಡ ಬಂಧಿಸಿತ್ತು. ರೇವಣ್ಣಕೂಡ ಹತ್ತು ದಿನ ಜೈಲುವಾಸವನ್ನು ಅನುಭವಿಸಿ ಬಂದಿದ್ದರು.

ಇದೀಗ ಈ ಪ್ರಕರಣದ ತನಿಖೆ ಬಹುತೇಕ ಸಂಪೂರ್ಣಗೊಂಡಿದ್ದು, ೨೫ ಕಡೆ ಸ್ಥಳ ಮಹಜರು, ಸಾಕ್ಷಿಗಳ ಹೇಳಿಕೆ, ಡಿಜಿಟಲ್‌ ಸಾಕ್ಷ್ಯಗಳನ್ನ ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಮಹತ್ವದ ಸಾಕ್ಷ್ಯಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಲು ಎಸ್‌ ಐಟಿ ತಂಡ ತಯಾರಿ ನಡೆಸಿದೆ.

 

Tags: