Mysore
17
few clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕಿಯೋನಿಕ್ಸ್‌ ಅಕ್ರಮ : ಐಎಎಸ್‌ ಅಧಿಕಾರಿ ಎಸ್‌.ಡಿ.ಮೀನಾ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶ !

ಬೆಂಗಳೂರು : ಕಿಯೋನಿಕ್ಸ್‌ ನಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಡಿ.ಮೀನಾ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಿಯೋನಿಕ್ಸ್‌ ತನಿಖೆ ನಡೆಸಲು ಹಣಕಾಸು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ತನಿಖಾ ಸಮಿತಿಯ ಮುಖ್ಯಸ್ಥರಿಗೆ ನೀಡಲಾಗಿದೆ.

ಕಿಯೋನಿಕ್ಸ್‌ ನಲ್ಲಿ ನಡೆದಿರುವ ಖರೀದಿಗಳು ಪಾರದರ್ಶಕವಾಗಿ ಹಾಗೂ ನಿಯಮಗಳಿಗೆ ಅನುಸಾರವಾಗಿ ಪರಿಶೀಲನೆ ಮಾಡಿ ತನಿಖೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!