Mysore
22
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

KEA Recruitment: ವಿವಿಧ ನಿಗಮ ಮಂಡಳಿಗಳಿಗೆ ನಡೆಸಿದ್ದ ಪರೀಕ್ಷೆಗಳ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ)ವಿವಿಧ ನಿಗಮ ಮಂಡಳಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯ ಪರಿಷೃತ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಿದೆ.

ಕನಾಟಕ ಪರೀಕ್ಷಾ ಪ್ರಾಧಿಕಾರವು 2024 ರ ಅಕ್ಟೋಬರ್‌ 28 ರಿಂದ ನವೆಂಬರ್‌ 25 ರವರೆಗೆ ಐದು ನಿಗಮ ಮಂಡಳಿಗಳ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಮೈಸೂರು ಸೇಲ್ಸ್‌ ಇಂಟರ್ ನ್ಯಾಷನಲ್‌ ಲಿಮಿಟೆಡ್‌, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕಟ್ಟಡ ಮತ್ತು ಇತರೆ ನಿಮಾಣ ಕಾಮಿಕ ಕಲ್ಯಾಣ ಮಂಡಳಿ, ಸೈನಿಕ ಕಲ್ಯಾಣ ಮತ್ತು ಪುನವಸತಿ ಇಲಾಖೆ, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮಗಳ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆ ಮಾಡಿದೆ.

ಈ ಐದು ನಿಗಮಗಳ ಪರೀಕ್ಷೆಯಲ್ಲಿ ಹಾಜರಾದ ಅಭ್ಯಥಿಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಕೆಇಎ 2024ರ ಏಪ್ರಿಲ್‌ 24 ರಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿ ಅಭ್ಯಥಿಗಳಿಂದ ಆಕ್ಷೇಪಣೆಗೆ ಅವಧಿ ನೀಡಿತ್ತು. ಅದರಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಪರಿಷೃತ ತಾತ್ಕಾಲಿಕ ಅಂಕಪಟ್ಟಿಯನ್ನು ತನ್ನ ವೆಬ್‌ ಸೈಟ್‌ https://cetonline.karnataka.gov.in/kea/indexnew ನಲ್ಲಿ ಪ್ರಕಟಿಸಲಾಗಿದೆ.

ಸದರಿ ಪರಿಷ್ಕೃತ ತಾತ್ಕಲಿಕ ಅಂಕಪಟ್ಟಿಗಳ ಆಕ್ಷೇಪಣೆಗಳಿದ್ದಲ್ಲಿ kea2023exam@gmail.com ಗೆ ಇ-ಮೇಲ್‌ ಮೂಲಕ 14-6-2024 ರ ಮಧ್ಯಾಹ್ನ 12ರೊಳಗೆ ಸಲ್ಲಿಸಬಹುದಾಗಿದೆ ಎಂದು ಕನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags:
error: Content is protected !!