Mysore
28
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇನ್ನುಮುಂದೆ ಮನಸೋ ಇಚ್ಚೆ ದರ ಏರಿಸುವ ಹಾಗಿಲ್ಲ; ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ!

ಓಲಾ, ಊಬರ್‌ ಹಾಗೂ ರಾಪಿಡೋ ಸೇರಿದಂತೆ ಇನ್ನೂ ಕೆಲ ಟ್ಯಾಕ್ಸಿ ಬುಕಿಂಗ್‌ ಅಪ್ಲಿಕೇಶನ್‌ಗಳು ಮನಸೋ ಇಚ್ಚೆ ದರ ನಿಗದಿ ಮಾಡುತ್ತಿವೆ. ರಾತ್ರಿ ಹತ್ತು ದಾಟಿದರೆ ಸಾಕು ದರವನ್ನು ಬೇಕಾಬಿಟ್ಟಿ ಏರಿಸಿಬಿಡುತ್ತಾರೆ, ಇನ್ನು ಮಳೆ ಬಂತೆಂದರೆ ಕೇಳುವ ಹಾಗೆ ಇಲ್ಲ ಒಂದೊಂದು ನಗರಗಳಲ್ಲಿ ಡಬಲ್‌ ರೇಟ್‌ ಫಿಕ್ಸ್‌ ಎಂದು ಪ್ರಯಾಣಿಕರು ಕಿಡಿಕಾರುತ್ತಲೇ ಇದ್ದರು.

ಹೀಗೆ ಖಾಸಗಿ ಟ್ಯಾಕ್ಸಿ ಬುಕಿಂಗ್‌ ಕಂಪನಿಗಳು ನಡೆಸುತ್ತಿದ್ದ ಆಟಟೋಪಕ್ಕೆ ಬ್ರೇಕ್‌ ಹಾಕಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ರಾಜ್ಯಾದ್ಯಂತ ಏಕರೂಪದ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ ತಿಂಗಳಿನಿಂದಲೇ ಈ ಹೊಸ ನಿಯಮ ಅನ್ವಯಿಸಲಿದೆ.

ಏಕರೂಪ ದರದ ಮಾನದಂಡಗಳು
* ಹತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್‌ವರೆಗೆ ಕನಿಷ್ಟ 100 ರೂ ನಿಗದಿ. 4 ಕಿಲೊಮೀಟರ್‌ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 24 ರೂಪಾಯಿ ನಿಗದಿ.
* 10ರಿಂದ 15 ಲಕ್ಷ ರೂಪಾಯಿಗಳ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್‌ವರೆಗೆ ಕನಿಷ್ಟ 115 ರೂ ನಿಗದಿ. 4 ಕಿಲೊಮೀಟರ್‌ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 28 ರೂಪಾಯಿ ನಿಗದಿ.
* 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್‌ವರೆಗೆ ಕನಿಷ್ಟ 130 ರೂ ನಿಗದಿ. 4 ಕಿಲೊಮೀಟರ್‌ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 32 ರೂಪಾಯಿ ನಿಗದಿ.

ಹೊಸ ನಿಯಮಗಳು:
* ವೈಯಕ್ತಿಕ ಲಗೇಜುಗಳಿಗೆ 120 ಕೆಜಿಗಳವರೆಗೆ ವಿನಾಯಿತಿ
* ಮೊದಲ 5 ನಿಮಿಷಗಳ ಕಾಯುವಿಕೆಗೆ ಶುಲ್ಕ ಇಲ್ಲ
* ಪ್ರಯಾಣಿಕರಿಂದ ಜಿಎಸ್‌ಟಿ, ಟೋಲ್‌ ವಸೂಲಿಗೆ ಅವಕಾಶ
* ಬೆಳಗಿನ ಜಾವ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!