Mysore
17
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಕರ್ನಾಟಕ ಬಜೆಟ್‌| ಯಾವ್ಯಾವ ಇಲಾಖೆಗೆ ಎಷ್ಟೇಷ್ಟು ಅನುದಾನ ಮೀಸಲು?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್‌ ಮಂಡಿಸಿದ್ದು, ವಿವಿಧ ವಲಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳಷ್ಟು ಅನುದಾನ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು(ಮಾರ್ಚ್‌.7) ಹಣಕಾಸು ಮಂತ್ರಿಯಾಗಿ 16ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಪೈಕಿ ಯಾವ್ಯಾವ ಇಲಾಖೆಗೆ ಎಷ್ಟೇಷ್ಟು ಅನುದಾನವನ್ನು ಮೀಸಲಿರಿಸಿದ್ದಾರೆ ಎಂಬುದನ್ನು ಈ ಕೆಳಕಂಡಂತೆ ನೋಡಬಹುದು.

ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲು

1. ಶಿಕ್ಷಣ ಇಲಾಖೆ: 45, 286 ಕೋಟಿ ರೂಪಾಯಿ
2. ಮಹಿಳಾ/ಮಕ್ಕಳ ಕಲ್ಯಾಣ ಇಲಾಖೆ: 34,955 ಕೋಟಿ ರೂಪಾಯಿ
3. ಇಂಧನ ಇಲಾಖೆ: 26,896 ಕೋಟಿ ರೂಪಾಯಿ
4. ಗ್ರಾಮೀಣಾಭಿವೃದ್ಧಿ ಇಲಾಖೆ: 26,735 ಕೋಟಿ ರೂಪಾಯಿ
5. ನೀರಾವರಿ ಇಲಾಖೆ: 22,181 ಕೋಟಿ ರೂಪಾಯಿ
6. ನಗರಾಭಿವೃದ್ಧಿ, ವಸತಿ ಇಲಾಖೆ: 21,405 ಕೋಟಿ ರೂಪಾಯಿ
7. ಒಳ ಆಡಳಿತ ಮತ್ತು ಸಾರಿಗೆ ಇಲಾಖೆ: 20,625 ಕೋಟಿ ರೂಪಾಯಿ
8. ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ: 17,473 ಕೋಟಿ ರೂಪಾಯಿ
9. ಕಂದಾಯ ಇಲಾಖೆ: 17,201 ಕೋಟಿ ರೂಪಾಯಿ
10. ಸಮಾಜ ಕಲ್ಯಾಣ ಇಲಾಖೆ: 16,955 ಕೋಟಿ ರೂಪಾಯಿ
11. ಲೋಕೋಪಯೋಗಿ ಇಲಾಖೆ: 11,841 ಕೋಟಿ ರೂಪಾಯಿ
12. ಆಹಾರ ಇಲಾಖೆ: 8,275 ಕೋಟಿ ರೂಪಾಯಿ
13. ಕೃಷಿ, ತೋಟಗಾರಿಕೆ ಇಲಾಖೆ: 7,145 ಕೋಟಿ ರೂಪಾಯಿ
14. ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ: 3,977 ಕೋಟಿ ರೂಪಾಯಿ
15. ಇತರೆ: 1,49,857 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಲಾಗಿದೆ.

Tags:
error: Content is protected !!