Mysore
20
overcast clouds

Social Media

ಬುಧವಾರ, 28 ಜನವರಿ 2026
Light
Dark

ನೀವು ಗೃಹ ಸಚಿವರೋ ಬೆನ್ನಿಗೆ ನಿಲ್ಲುವ ಗ್ರಹ ಸಚಿವರೋ? : ಬಿಜೆಪಿ ವ್ಯಂಗ್ಯ

ಬೆಂಗಳೂರು: ಕಲಬುರ್ಗಿಯ ಸಚಿನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಗಾಂಧಿ ಪರವಾಗಿ ಬೆನ್ನಿಗೆ ನಿಂತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ನೀವು ಗೃಹ ಸಚಿವರೋ ಅಥವಾ ಬೆನ್ನಿಗೆ ನಿಲ್ಲುವ ಗ್ರಹ ಸಚಿವರೋ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿಯೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ನೀವು ಯಾವತ್ತಾದರೂ ಅನ್ಯಾಯಕ್ಕೆ ಒಳಗಾದವರ ಬೆನ್ನಿಗೆ ನಿಂತಿದ್ದೀರಾ ಹೇಳಿ?ಆತ್ಮಹತ್ಯೆ ಮಾಡಿಕೊಂಡ ಸಚಿನ್‌ ಪಾಂಚಾಳ್‌ ಕುಟುಂಬದ ಬೆನ್ನಿಗೆ ನಿಂತುಕೊಳ್ಳುವುದು ಬಿಟ್ಟು, ಸಾವಿಗೆ ಕಾರಣರಾದ ಪ್ರಿಯಾಂಕ್‌ ಖರ್ಗೆ ಅವರ ಬೆನ್ನಿಗೆ ನಿಂತಿದ್ದೀರಿ ಎಂದರೆ, ನಿಮ್ಮ ಮನಸಾಕ್ಷಿ ಅದ್ಹೇಗೆ ಒಪ್ಪಿಕೊಂಡಿದೆ? ಎಂದು ವಾಗ್ದಾಳಿ ನಡೆಸಿದೆ.

ನೀವು ಯಾವಾಗಲೂ ದುಷ್ಟರ ಬೆನ್ನಿಗೆ ನಿಂತುಕೊಳ್ಳುತ್ತೀರಿ ಎನ್ನುವುದು ಮೊದಲಿನಿಂದಲೂ ಸಾಬೀತಾಗಿದೆ. ಅದಕ್ಕೆ ಸಾಕ್ಷಿಯಾಗಿ ಪಾಕ್‌ ಪರ ಘೋಷಣೆ ಕೂಗಿದವರ ಬೆನ್ನಿಗೆ ನಿಂತಿದ್ದೀರಿ, ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿದವರ ಬೆನ್ನಿಗೆ ನಿಂತಿದ್ದೀರಿ, ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದ ಮತಾಂಧರ ಬೆನ್ನಿಗೆ ನಿಂತಿದ್ದೀರಿ, ಹುಬ್ಬಳ್ಳಿ ಗಲಭೆಕೋರರ ಬೆನ್ನಿಗೆ ನಿಂತಿದ್ದೀರಿ, ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಉಗ್ರರ ಪರವಾಗಿ ನಿಂತಿದ್ದೀರಿ, ಶಿವಮೊಗ್ಗದಲ್ಲಿ ಕಲ್ಲು ತೂರಿದ ಮತಾಂಧರ ಬೆನ್ನಿಗೆ ನಿಂತಿದ್ದೀರಿ, ಬೆಳಗಾವಿ ಸುವರ್ಣಸೌಧದಲ್ಲಿ ಗೂಂಡಾಗಿರಿ ಮಾಡಿದವರ ಬೆನ್ನಿಗೆ ನಿಂತಿದ್ದೀರಿ ಹಾಗೂ ಇದೀಗ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Tags:
error: Content is protected !!