Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : SSLC  ಪರೀಕ್ಷೆ -೨ ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಬಿಡುಗಡೆ ಮಾಡಿದ್ದು, ಇಲಾಖೆಯ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ ಫಲಿತಾಂಶಗಳನ್ನ ಪರಿಶೀಲನೆ ಮಾಡಬಹುದಾಗಿದೆ.

ಕರ್ನಾಟಕ ಎಸ್‌ ಎಸ್‌ ಎಲ್‌ ಸಿ ಪೂರಕ ಪರೀಕ್ಷೆಯನ್ನ ಜೂನ್‌ ೧೪ ಮತ್ತು ಜೂನ್‌ ೨೧ ರ ಅವಧಿಯಲ್ಲಿ ನಡೆದಿದ್ದವು. ೧.೨೯ ಲಕ್ಷಕ್ಕೂ  ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್‌ ೧೪ ರಿಂದ ಜೂನ್‌ ೨೧ರವೆರೆಗೆ ಕರ್ನಾಟಕದ ೭೨೪ ಪರೀಕ್ಷಾ ಕೇಂದ್ರಗಳಲ್ಲಿ ಪೂರಕ ಪರೀಕ್ಷೆಗಳು ನಡೆದಿದ್ದವು. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಸುಮಾರು ೧೩೦೮೫ ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳುವುದಕ್ಕಾಗಿ ಎರಡನೇ ಪರೀಕ್ಷೆ ಹೆಸರು ನೊಂದಾಯಿಸಿಕೊಂಡಿದ್ದರು. ಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನ ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿಯ ಅಧಿಕೃತ ವೆಬ್‌ ಸೈಟ್‌ keab.karnataka.gov.in ಮತ್ತು karresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.

Tags:
error: Content is protected !!