ಬೆಂಗಳೂರು : ರಾಜ್ಯದಲ್ಲಿ ೬ ದಿನ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಇಂದಿನಿಂದ ೬ ದಿನಗಳವರೆಗೆ ಮಳೆ ಮುಂದುವರೆಯಲಿದೆ. ಈ ಕಾರಣದಿಂದ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಕೂಡ ಇಂದಿನಿಂದ ೫ ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿಯೂ ಕೂಡ ೪ ದಿನ ಮೋಡ ಕವಿದ ವಾತಾವರಣದವಿರಲಿದ್ದು, ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ೨೮ ಡಿಗ್ರಿ ಸೆಲ್ಸಿಯಸ್ , ಕನಿಷ್ಠ ೨೧ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮೈಸೂರಿನಲ್ಲಿ ಗರಿಷ್ಠ ತಾಪಮಾನ ೨೮ ಡಿಗ್ರಿ ಸೆಲ್ಸಿಯಸ್ , ಕನಿಷ್ಠ ೨೧ ಡಿಗ್ರಿ ಸೆಲ್ಸಿಯಸ್ ಹಾಗೂ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ ೨೧ ಡಿಗ್ರಿ ಸೆಲ್ಸಿಯಸ್ , ಕನಿಷ್ಠ ೧೭ ಡಿಗ್ರಿ ಸೆಲ್ಸಿಯಸ್ , ಇನ್ನು ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ ೨೬ ಡಿಗ್ರಿ ಸೆಲ್ಸಿಯಸ್ , ಕನಿಷ್ಠ ೨೨ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.