Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ತಿರುಪತಿ ಲಡ್ಡು ಪ್ರಕರಣ: ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳ ಪ್ರಸಾದ ಪರೀಕ್ಷೆಗೆ ರಾಮಲಿಂಗರೆಡ್ಡಿ ಆದೇಶ

ಬೆಂಗಳೂರು: ಆಂಧ್ರದ ತಿರುಪತಿ ತಿರುಮಲ ದೇವಾಲಯದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ವರದಿ ಹೊರಬಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ವ್ಯಾಪ್ತಿಗೊಳಪಡುವ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಸೂಚನೆ ನೀಡಿದೆ.

ನೆರೆ ರಾಜ್ಯ ಆಂಧ್ರದ ತಿರುಪತಿ ದೇವಸ್ಥಾನದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಬೆಳಕಿಗೆ ಬಂದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಹಿನ್ನೆಲ್ಲೆಯಲ್ಲಿ ರಾಜ್ಯದ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಡುವ ಸುಮಾರು 34 ಸಾವಿರಕ್ಕೂ ಹೆಚ್ಚು ದೇವಾಲಯಗಳಿಗೂ ಪ್ರಸಾದವನ್ನು ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

ಮುಜರಾಯಿ ಇಲಾಖೆಯಲ್ಲಿ ಇಲ್ಲಿಯವರೆಗೂ 205 ದೇವಾಲಯಗಳು ವಾರ್ಷಿಕ ಆದಾಯ 25 ಲಕ್ಷ ರೂ.ಗಳಿಗಿಂತ ಅಧಿಕವಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿದೆ. ಬಿ ವರ್ಗದ 193 ದೇವಾಲಯಗಳು 5 ಲಕ್ಷದಿಂದ 25 ಲಕ್ಷದವರೆಗೆ ಆದಾಯವನ್ನು ಗಳಿಸುತ್ತವೆ. ಇನ್ನುಳಿದ ದೇವಾಲಯಗಳು 5 ಲಕ್ಷ ರೂ. ಗಳಿಸುವುದಕ್ಕೆ ಸಿ ವರ್ಗದ ದೇವಾಲಯಗಳು ಎಂದು ವರ್ಗೀಕರಿಸಲಾಗಿದೆ. ಈ ಎಲ್ಲಾ ದೇವಾಲಯಗಳು ಸಾಮಾನ್ಯವಾಗಿ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತವೆ.

ಪ್ರಸಾದದ ಪರೀಕ್ಷೆ ಯಾಕೆ? ಸಚಿವ ರಾಮಲಿಂಗರೆಡ್ಡಿ ಹೇಳಿರುವುದೇನು?
ಕರ್ನಾಟಕದ ದೇವಾಲಯಗಳು ಭಕ್ತರಿಗೆ ಆರೋಗ್ಯಕರ ಹಾಗೂ ಸುರಕ್ಷಿತ ಪ್ರಸಾದ ಮತ್ತು ಆಹಾರವನ್ನು ನೀಡುತ್ತವೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಈ ಇಲಾಖೆ ವ್ಯಾಪ್ತಿಗೆ ಒಳಪಡುವ ಯಾವುದೇ ದೇವಾಲಯಗಳ ಪ್ರಸಾದದ ವಿಚಾರದಲ್ಲಿ ಜನರಿಗೆ ಯಾವುದೇ ಅನುಮಾನ ಮತ್ತು ಭಯವಿರಬಾರದು. ಆ ಕಾರಣಕ್ಕಾಗಿ ಪ್ರಸಾದಗಳ ಪರೀಕ್ಷೆ ನಡೆಸುವಂತೆ ಸುತ್ತೋಲೆ ಮೂಲಕ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪವನ್ನೇ ಬಳಸಿ: ಸುತ್ತೋಲೆ
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಸರ್ಕಾರ ದೇಗುಲಗಳಲ್ಲಿ ವಿತರಿಸುವ ಪ್ರಸಾದವನ್ನು ಪರೀಕ್ಷಿಸಬೇಕು ಎಂದು ಆಗ್ರಹಿಸಿದ್ದರು. ಹೀಗಾಗಿ ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸಲು ಹಾಗೂ ದೀಪಗಳನ್ನು ಬೆಳಗಿಸಲು ನಂದಿನಿ ತುಪ್ಪವನ್ನೇ ಬಳಸುವಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

Tags: