ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಈ ಸಭೆಯಲ್ಲಿ 35 ವಿಷಯಗಳ ಚರ್ಚೆ ನಡೆದಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಹೆಚ್‌ಕೆ ಪಾಟೀಲ್ ನೋಂದಣಿ ವಿವಾಹ ಸರಳೀಕರಣಕ್ಕೆ ಸಮ್ಮತಿ ಹಾಗೂ ಹಿಂದೂ ಮ್ಯಾರೇಜ್ ಆಕ್ಟ್ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದಿನೆ ನೀಡಿದೆ ಎಂದು ಹೇಳಿಕೆ ನೀಡಿದರು.
ಮೊದಲು ಕಚೇರಿಗಳಲ್ಲಿ ನೋಂದಣಿ ವಿವಾಹವಾಗುತ್ತಿದ್ದವು. ಈಗ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ಗ್ರಾಮ 1, ಕಾವೇರಿ 2 ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇನ್ನುಮುಂದೆ ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಬೇಕು ಎಂದಿಲ್ಲ ಎಂದು ಮಾಹಿತಿ ನೀಡಿದರು.





