Mysore
19
mist

Social Media

ಗುರುವಾರ, 09 ಜನವರಿ 2025
Light
Dark

ಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಅಜೆಂಡಾ: ಬಿಜೆಪಿ ಕಿಡಿ

ಬೆಂಗಳೂರು: ಸಿಎಂ ಕುರ್ಚಿ ಉಳಿಸಿಕೊಳ್ಳುವ ಮತ್ತು ಒಲಿಸಿಕೊಳ್ಳುವ ಆಟವೇ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಅಜೆಂಡಾವಾಗಿದೆ ಎಂದು ಬಿಜೆಪಿ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿಯೂ, ಕಾಂಗ್ರೆಸ್ಸಿನ ಮುಖ್ಯಮಂತ್ರಿ ಜಗಳ ಬಗೆಹರಿಯುತ್ತಿಲ್ಲ, ಮತ್ತೊಂದು ಕಡೆ ರಾಜ್ಯದ ಅಭಿವೃದ್ಧಿ ನಡೆಯುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಸಚಿವ ಸಂಪುಟ ಸಭೆ, ಅಭಿವೃದ್ಧಿಗಾಗಿ ಸಭೆ ನಡೆಸಿದ್ದಕ್ಕಿಂತ ಸಿಎಂ ಕುರ್ಚಿಗಾಗಿ ‘ಡಿನ್ನರ್‌ ಸಭೆ’ ನಡೆಸಿದ್ದೇ ಹೆಚ್ಚು ಎಂದು ವ್ಯಂಗ್ಯವಾಡಿದೆ.

ಒಬ್ಬೊಬ್ಬರು ಸಚಿವರು ಸಭೆ ನಡೆಸಿ, ಮುಂದಿನ ಸಿಎಂ ನಾನೇ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈಗ ಅಧಿಕಾರದಲ್ಲಿರುವ ಸಿಎಂ ಇಂತಹ ಪ್ರಹಸನಗಳನ್ನು ಸೃಷ್ಟಿಸುವುದರಲ್ಲೇ ನಿರತರಾಗಿದ್ದಾರೆ. ಪರಿಣಾಮವಾಗಿ ರಾಜ್ಯ ಅನಾಥವಾಗಿದೆ, ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲವಾಗಿದೆ. ಅಲ್ಲದೇ ಸಿಎಂ ಕುರ್ಚಿ ಉಳಿಸಿಕೊಳ್ಳುವ ಮತ್ತು ಒಲಿಸಿಕೊಳ್ಳುವ ಆಟವೇ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಅಜೆಂಡಾವಾಗಿದೆ ಎಂದು ವಾಗ್ದಾಳಿ ನಡೆಸಿದೆ.

Tags: