Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಾಲ್ಕನೇ ದಿನಕ್ಕೆ ಕಾಲಿಟ್ಟ ಅಧಿವೇಶನ ; ಸದನದ ಬಾವಿಗಿಳಿದು ಬಿಜೆಪಿ-ಜೆಡಿಎಸ್ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಮೂರನೇ ದಿನವೂ ಸಹ ಸದನ ವಾಲ್ಮೀಕಿ ಹಗರಣ ಚರ್ಚೆಯಲ್ಲೆ ಕಳೆದು ಹೋಗಿತ್ತು. ಅಲ್ಲದೆ ರೈತನಿಗೆ ಅಪಮಾನ ಮಾಡಿದ ಜಿಟಿ ಮಾಲ್‌ ವಿಚಾರ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆಗಳು ನಡೆಯಿತು.  ಹೀಗಾಗಿ  ನಾಲ್ಕನೇ ದಿನವಾದ ಇಂದಾದರೂ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಗಳು ಚರ್ಚೆಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸದನ ಆರಂಭದಲ್ಲೆ ವಾಲ್ಮೀಕಿ ಹಗರಣದ ವಿರುದ್ಧ ವಿರೋಧಪಕ್ಷಗಳು  ಪ್ರತಿಭಟನೆ ನಡೆಸಲು ಮುಂದಾದರು.

ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣ ವಿರುದ್ಧ ಇಂದು ಸಹ ಬಿಜೆಪಿ ಜೆಡಿಎಸ್‌ ಸದನ ಬಾವಿಗಿಳಿದು, ಸಿಎಂ ಸಿದ್ದರಾಮಯ್ಯ ಉತ್ತರಕೊಡಬೇಕು. ವಾಲ್ಮೀಕಿ ಹಗರಣದಲ್ಲಿ ದುಡ್ಡು ತಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಲು ಮುಂದಾದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರ ಶುರುವಾಗಿ ಕೊನೆಗೆ ಸದನದಲ್ಲಿ ಗದ್ದಲ ಶುರುವಾಯಿತು. ಈ ವೇಳೆ ಸ್ಪೀಕರ್‌ ಯು.ಟಿ ಖಾದರ್‌ ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.

Tags: