Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬೆಂಗಳೂರು ಕಂಬಳದಲ್ಲಿ ಪದಕ ಗೆದ್ದ ಕಾಂತಾರ ಚಿತ್ರದ ಕೋಣಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿ ಭಾಗದ ಜನಪ್ರಿಯ ಕ್ರೀಡಾ ಆಚರಣೆಯಾದ ಕಂಬಳ ಸ್ಪರ್ಧೆ ಆಯೋಜನೆಯಾಗಿದೆ. ಈ ಕಂಬಳದಲ್ಲಿ 200 ಕೋಣಗಳು ಭಾಗಿಯಾಗಿದ್ದು, ವಿವಿಧ ಕಂಬಳ ಸ್ಪರ್ಧೆಗಳಲ್ಲಿ ಪೈಪೋಟಿ ನಡೆಸುತ್ತಿವೆ. ಇನ್ನು ಇದೇ ಕಂಬಳದ ಕನೆಹಲಗೆ ವಿಭಾಗದಲ್ಲಿ ಕಾಂತಾರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೋಣಗಳು ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.

ಹೌದು, ಕಾಂತಾರ ಚಿತ್ರದಲ್ಲಿ ನಟ ರಿಷಬ್‌ ಶೆಟ್ಟಿ ನಿರ್ವಹಿಸಿದ್ದ ಕಾಡುಬೆಟ್ಟು ಶಿವ ಪಾತ್ರದ ಇಂಟ್ರೊಡಕ್ಷನ್‌ ದೃಶ್ಯ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಈ ದೃಶ್ಯದಲ್ಲಿ ರಿಷಬ್‌ ಶೆಟ್ಟಿ ಎರಡು ಕೋಣಗಳನ್ನು ಹಿಡಿದು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಡಲ್ ಗೆಲ್ಲುತ್ತಾರೆ. ಕೊನೆಗೆ ಗೆದ್ದ ಪದಕವನ್ನು ಕೋಣಗಳಿಗೆ ಅರ್ಪಿಸುತ್ತಾರೆ.

ಹೀಗೆ ರೀಲ್‌ನಲ್ಲಿ ಓಡಿ ಪದಕ ಗೆದ್ದ ಅಪ್ಪು ಹಾಗೂ ಕಿಟ್ಟಿ ಎಂಬ ಈ ಎರಡು ಕೋಣಗಳು ಇದೀಗ ರಿಯಲ್‌ನಲ್ಲಿಯೂ ಪದಕವನ್ನು ಗೆದ್ದಿವೆ. ಇನ್ನು ಉಡುಪಿಯ ಬೈಂದೂರಿನ ಚೈತ್ರ ಪರಮೇಶ್ವರ್‌ ಭಟ್‌ ಎಂಬುವವರ ಒಡೆತನದ ಕೋಣಗಳು ಇವಾಗಿದ್ದು, ಚಿತ್ರದಲ್ಲಿ ಕಂಡಿದ್ದ ಈ ಕೋಣಗಳನ್ನು ನಿಜವಾಗಿಯೂ ನೋಡಿದ ಬೆಂಗಳೂರು ಜನತೆ ಆ ಕೋಣಗಳ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ