Mysore
19
overcast clouds

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಕೆನಡಾದಲ್ಲಿ ಕನ್ನಡಿಗನ ಹತ್ಯೆ ಪ್ರಕರಣ: ಆರೋಪಿ ಭಾವಚಿತ್ರ ಬಿಡುಗಡೆ

ನೆಲಮಂಗಲ: ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ನೆಲಮಂಗಲದ ತ್ಯಾಮಗೊಂಡ್ಲು ನಿವಾಸಿ ಚಂದನ್‌ ಕುಮಾರ್‌ ಕೆನಡಾದಲ್ಲಿ ಕೊಲೆಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟೊರಂಟೋ ಪೊಲೀಸರು ಚಂದನ್‌ ಕುಮಾರ್‌ ಕೊಲೆಯ ಬಗ್ಗೆ ಪ್ರೆಸ್‌ ಮೀಟ್‌ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ.

ಇಷಯಾ ಥಾಮಸ್‌ ಬಡ್ಗೇರ್‌ ಎಂಬುವವನೇ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಟುಕಾಟ ಮುಂದುವರಿಸಿದ್ದಾರೆ.

 

Tags:
error: Content is protected !!