Mysore
28
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ದರ್ಶನ್‌ರನ್ನು ನೋಡಲು ಬಂದ ಸ್ಟಾರ್‌ ದಂಪತಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರನ್ನು ನಟಿ ರಕ್ಷಿತಾ ಪ್ರೇಮ್‌ ದಂಪತಿ ಭೇಟಿ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. 4 ಮಂದಿ ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿದ್ದು, ಉಳಿದ 13 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ.

ಇನ್ನು ನಟ ದರ್ಶನ್‌ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್‌ ಜೈಲಿಗೆ ಭೇಟಿ ಕೊಟ್ಟಿದ್ದರು. ಇದೀಗ ದರ್ಶನ್‌ರನ್ನು ನೋಡಲು ನಟಿ ರಕ್ಷಿತಾ ಪ್ರೇಮ್‌ ಹಾಗೂ ಪ್ರೇಮ್‌ ಇಬ್ಬರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಕಾರಿನಲ್ಲಿಯೇ ಜೈಲಿನ ಆವರಣಕ್ಕೆ ಎಂಟ್ರಿಕೊಟ್ಟ ರಕ್ಷಿತಾ ಪ್ರೇಮ್‌ ಹಾಗೂ ಪ್ರೇಮ್‌ ಅವರು ಕೆಲ ಹೊತ್ತು ಕಾದು ಕುಳಿತು ಜೈಲಿನ ಒಳಗಡೆ ಹೋಗಿದ್ದಾರೆ.

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪವಿತ್ರಾಗೌಡೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ದರ್ಶನ್‌ ಅಂಡ್‌ ಗ್ಯಾಂಗ್‌ ಬಿಗ್‌ ಪ್ಲಾನ್‌ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬಳಿಕ ಆತನಿಗೆ ಚಿತ್ರಹಿಂಸೆ ಕೊಟ್ಟು ಬಹಲ ಕ್ರೂರವಾಗಿ ಕೊಲೆ ಮಾಡಿದ್ದರು.

ಬಳಿಕ ಜೂನ್.‌9ರಂದು ವಿಕೃತ ಸ್ಥಿತಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಯುವಕ ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿದಿತ್ತು. ಮೂಗು ಓಪನ್‌ ಆಗುವಂತೆ ಗುದ್ದಿದ್ದರು. ಕಾಲಿನಿಂದ ಮರ್ಮಾಂಗಕ್ಕೆ ಒದೆಯಲಾಗಿತ್ತು. ಎಡಭಾಗದ ಪಕ್ಕೆಲುಬು ಕಟ್‌ ಆಗುವಂತೆ ಹಲ್ಲೆ ಮಾಡಲಾಗಿತ್ತು. ರೇಣುಕಾಸ್ವಾಮಿ ಅವರ ಕಾಲು ಮತ್ತು ಕೈಗೆ ಬ್ಯಾಟ್‌ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಲಾಗಿತ್ತು. ಮೃತ ವ್ಯಕ್ತಿಯ ಕಿವಿ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಈ ಕೇಸನ್ನು ಕೈಗೆತ್ತಿಕೊಂಡಿದ್ದ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿ ಸಾಕ್ಷಿ ಸಮೇತ ಅಸಲಿ ವಿಚಾರವನ್ನು ಬೆಳಕಿಗೆ ತಂದರು.

Tags:
error: Content is protected !!