ರಾಮನಗರ: ಇಲ್ಲಿನ ಕನಕಪುರ-ರಾಮನಗರ ಮುಖ್ಯ ರಸ್ತೆಯ ಅಚ್ಚಲು ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ಕೂಟರ್‌ಗೆ ಡಿಕ್ಕಿ ಆಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಒಬ್ಬರು ಸ್ಥಿತಿ ಗಂಭೀರವಾಗಿದೆ. ಪ್ರದೀಪ್(5) ಮತ್ತು ಭವ್ಯ(3)ಮೃತ ಮಕ್ಕಳು. ಇಬ್ಬರೂ ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಬೈರಪ್ಪ ಅವರ ಮಕ್ಕಳು.
ಭೈರಪ್ಪ ಅವರು ತಮ್ಮ ಮಕ್ಕಳನ್ನು ಅಚ್ಚಲು ಕಾಲೋನಿಯ ಸಂಬಂಧಿ ಗೋವಿಂದ ಅವರ ಮನೆಗೆ ಕಳುಹಿಸಿದ್ದು, ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ಬೆಳಿಗ್ಗೆ 9 ಗಂಟೆ ಮಕ್ಕಳು ಹಾಗೂ ಸ್ನೇಹಿತ ಮಧು ಅವರನ್ನು ಕರೆದುಕೊಂಡು ತಮ್ಮ ಸ್ಕೂಟರ್‌ನಲ್ಲಿ ಫಾರಂಗೆ ಹೋಗುವಾಗ ಮಾರ್ಗಮಧ್ಯೆ ಗ್ರಾಮದ ತಿರುವಿನಲ್ಲಿ ವೇಗವಾಗಿ ಬಂದ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮುಂಭಾಗದಲ್ಲಿ ಕುಳಿತಿದ್ದ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮಧು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಗೋವಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಘಟನೆ ಸಂಬಂಧ ಬಸ್ ವಶಪಡಿಸಿಕೊಂಡಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





