Mysore
32
few clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಆರ್ಟ್‌ ಆಫ್‌ ಗೀವಿಂಗ್‌ನಲ್ಲಿ ಮಾನವೀಯತೆ ಮುಖ್ಯ : ಜಸ್ಟೀಸ್ ಸಂತೋಷ್ ಹೆಗಡೆ

ಬೆಂಗಳೂರು : ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿಯ ವಾತಾವರಣ ನೆಲೆಗೊಳ್ಳಲಿದೆ ಎಂದು ಜಸ್ಟೀಸ್ ಎನ್.ಸಂತೋಷ್ ಹೆಗಡೆ ಹೇಳಿದರು.

ನಗರದ ಗಾಂಧಿ ಭವನದಲ್ಲಿ ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ಹೊಂದುವ ಕುರಿತ ಘೋಷವಾಕ್ಯದಡಿ ಅಂತರರಾಷ್ಟ್ರೀಯ ಆರ್ಟ್ ಆಫ್ ಗೀವಿಂಗ್ ದಿನಾಚರಣೆ ಉದ್ಘಾಟಿಸಿ, ಜಾಗತಿಕ ಮಟ್ಟದಲ್ಲಿ ಸಮಾಜ ಸೇವೆ ಹಾಗೂ ಸಮಾಜದ ಪರಿವರ್ತನೆಗಾಗಿ ಮಾಜಿ ಲೋಕಸಭಾ ಸದಸ್ಯ ಹಾಗೂ ಕಿಟ್ [ಕೆಐಐಟಿ] ಮತ್ತು ಕಿಸ್ (ಕೆಐಎಸ್ಎಸ್) ವಿಶ್ವವಿದ್ಯಾಲಯಗಳ ಸ್ಥಾಪಕ ಅಚ್ಯುತ ಸಮಂತಾ ರಚಿಸಿರುವ ಕೃತಿ ಬಿಡುಗಡೆ ಮಾಡಿದರು.

ಬಳಿಕ ಬೆಂಗಳೂರಿನ ವಿವಿಧ ಭಾಗಗಳಿಂದ ಬಂದಿದ್ದ ಉತ್ತಮ ನೆರೆಹೊರೆಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಇದು ನಿಜಕ್ಕೂ ಅರ್ಥಪೂರ್ಣ ಮತ್ತು ಅತ್ಯಂತ ರಚನಾತ್ಮಕ ಕಾರ್ಯಕ್ರಮ. ಸಾರ್ವಜನಿಕರ ನಡುವೆ ಉತ್ತಮ ಒಡನಾಟವಿದ್ದರೆ ಸೌಹಾರ್ದತೆ ಮೂಡಲಿದೆ. ಆರ್ಟ್ ಆಫ್ ಗೀವಿಂಗ್ ನಲ್ಲಿ ಮಾನವೀಯತೆ ಅತ್ಯಂತ ಮುಖ್ಯ ಎಂದರು.

ಆರ್ಟ್ ಗೀವಿಂಗ್ ಉತ್ತಮ ಉದ್ದೇಶ ಹೊಂದಿದೆ. ಆದರೆ ಲಂಚ ಎಂಬುದು ಬಹುದೊಡ್ಡ ಪಿಡುಗು. ಹೀಗಾಗಿ ಲಂಚದ ವಿಚಾರದಲ್ಲಿ ಆರ್ಟ್ ಆಫ್ ಗೀವಿಂಗ್, ಆರ್ಟ್ ಆಫ್ ಟೇಕಿಂಗ್ ಎರಡೂ ಒಳ್ಳೆಯದಲ್ಲ. ಚೀನಾನದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ಇದೆ. ಆದರೂ ಅಲ್ಲಿ ಭಾರತಕ್ಕಿಂತಲೂ ಹೆಚ್ಚು ಭ್ರಷ್ಟಾಚಾರವಿದೆ. ನಮ್ಮಲ್ಲಿ ಒಂದು ಭ್ರಷ್ಟಾಚಾರ ಪ್ರಕರಣ ಇತ್ಯರ್ಥವಾಗಲು ನ್ಯಾಯಾಲಯಗಳಲ್ಲಿ 45 ವರ್ಷ ತೆಗೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಕೆಲ ವರ್ಷಗಳ ಹಿಂದೆ ಹರೀಶ್ ನಂಜಪ್ಪ ಎಂಬುವರು ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾಗಿ ಬಿದ್ದಿದ್ದಾಗ ಯಾರೋಬ್ಬರೂ ಅವರಿಗೆ ಒಂದು ತೊಟ್ಟು ನೀರು ಕೊಟ್ಟು ಉಪಚರಿಸಲಿಲ್ಲ. ಸಾವಿನ ಜೊತೆ ಸೆಣಸಾಡುತ್ತಿರುವಾಗಲೂ ಹರೀಶ್ ನಂಜಪ್ಪ ಆಂಬ್ಯುಲೆನ್ಸ್ ನಲ್ಲಿ ತೆರಳುವಾಗ ನನ್ನ ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡುತ್ತಾನೆ. ಇದು ನಿಜವಾದ ಆರ್ಟ್ ಆಫ್ ಗೀವಿಂಗ್. ಆರ್ಟ್ ಆಫ್ ಗೀವಿಂಗ್ ನಂತಹ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಸಮಾಜ ಪ್ರೋತ್ಸಾಹಿಸಬೇಕು ಎಂದು ಜಸ್ಟೀಸ್ ಸಂತೋಷ್ ಹೆಗಡೆ ಹೇಳಿದರು.

ಅಂತಾರಾಷ್ಟ್ರೀಯ ಜಾನಪದ ಗಾಯಕಿ ಸವಿತ ಮಾತನಾಡಿ, ಆರ್ಟ್ ಆಫ್ ಗೀವಿಂಗ್ ಪರಿಕಲ್ಪನೆ ಸಾಕಾರಗೊಳ್ಳಲು ಹೃದಯವಂತಿಕೆ ಇರಬೇಕು. ನಮ್ಮ ನೆರೆ ಹೊರೆಯವರು, ತಿಳಿದಿರುವವರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಆರ್ಥಿಕ ಸಹಾಯವೇ ಆಗಿರಬಹುದು, ಸಾಂತ್ವಾನ, ಅನುಕಂಪ ಇವೆಲ್ಲವೂ ಮನುಷ್ಯನ ಬದುಕಿನಲ್ಲಿ ಭಾರೀ ಬದಲಾವಣೆ ತರಲಿದೆ ಎಂದರು.

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ರಾಜ್ಯಾಧ್ಯಕ್ಷ ಗುರುಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡೇಗೌಡ ಅವರು ಕಿಟ್ [ಕೆಐಐಟಿ] ಮತ್ತು ಕಿಸ್ (ಕೆಐಎಸ್ಎಸ್) ವಿಶ್ವವಿದ್ಯಾಲಯಗಳ ಸ್ಥಾಪಕರಾದ ಅಚ್ಯುತ ಸಮಂತಾ ನಡೆದು ಬಂದ ಹಾದಿಯ ಕುರಿತು ಬೆಳಕು ಚೆಲ್ಲಿದರು. ಸಂಸ್ಥೆಯ ಸದಸ್ಯರಾದ ಮಮತಾ ಎನ್ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Tags:
error: Content is protected !!