Mysore
21
overcast clouds
Light
Dark

ಕುಮಾರಸ್ವಾಮಿ ಅರೆಸ್ಟ್‌ ಮಾಡಲು ಒಬ್ಬ ಕಾನ್ಸ್‌ಟೇಬಲ್‌ ಸಾಕು: ಸಿಎಂ ಸಿದ್ದರಾಮಯ್ಯ

ವಿಜಯಪುರ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಜಾಸ್ತಿಯಾಗಿವೆ.

ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌ಡಿಕೆ ವಿರುದ್ಧದ ಹಳೇ ಪ್ರಕರಣವನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಈ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಎಸ್‌ಐಟಿ ರಾಜ್ಯಪಾಲರಿಗೆ ಮನವಿ ಮಾಡಿದೆ.

ಇದರಿಂದ ಕೆರಳಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಸಿದ್ದರಾಮಯ್ಯರಂತಹ ನೂರು ಜನ ಬಂದರೂ ನನ್ನನ್ನು ಅರೆಸ್ಟ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಅಲ್ಲ ಒಬ್ಬ ಕಾನ್ಸ್‌ಟೇಬಲ್‌ ಸಾಕು. ಅರೆಸ್ಟ್‌ ಮಾಡಿಸುವ ಕೆಲಸ ನನ್ನದಲ್ಲ ಪೊಲೀಸರದ್ದು ಎಂದು ಟಾಂಗ್‌ ಕೊಟ್ಟಿದ್ದಾರೆ.

ಈ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕೂಡ ಬಂಧನದ ಭೀತಿ ಎದುರಾಗಲಿದೆ ಎನ್ನಲಾಗಿದ್ದು, ರಾಜ್ಯಪಾಲರು ಪ್ರಸಿಕ್ಯೂಷನ್‌ಗೆ ಅನುಮತಿ ನೀಡಿದರಷ್ಟೇ ಮುಂದಿನ ಬೆಳವಣಿಗೆ ಹೇಗಾಗಲಿದೆ ಎಂಬುದು ತಿಳಿಯಲಿದೆ.