Mysore
26
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಕ್ಯಾಬಿನೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಮತ್ತೆ ಚರ್ಚೆ..?

ಬೆಂಗಳೂರು  : ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಿಲ್‌ ಮಂಡನೆ ವಿಚಾರವಾಗಿ ಇವತ್ತು ಕ್ಯಾಬಿನೆಟ್‌ ನಲ್ಲಿ ಮತ್ತೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕಳೆದ ವಾರ ಕ್ಯಾಬಿನೆಟ್‌ ಒಪ್ಪಿಗೆಗೆ ತಾತ್ಕಾಲಿಕ ತಡೆ ನೀಡಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದರು. ಹಾಗಾಗಿ ಸಂಜೆ ನಡೆಯುವ ಕ್ಯಾಬಿನೆಟ್‌ ನಲ್ಲಿ ಕಾನೂನು ತಜ್ಞರು  ವರದಿ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ಮ್ಯಾನೇಜ್ಮೆಂಟ್‌ ಹುದ್ದೆ , ನಾನ್‌ ಮ್ಯಾನೇಜ್ಮೆಂಟ್‌ ಹುದ್ದೆಗಳ ಮೀಸಲಾತಿ ಪರಿಶೀಲನೆ ಬಗ್ಗೆ ಚರ್ಚೆ ನಡೆಯಬಹುದು. ಇನ್ನು ರಾಜ್ಯ ಸರ್ಕಾರದ ಬಿಲ್‌ ಮಂಡನೆಗೆ ಮುಂದಾಗಿದ್ದಕ್ಕೆ ಹಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದರು. ದೇಶದಲ್ಲೆಡೆ ಸದ್ದು ಮಾಡಿದ ಕಾರಣಕ್ಕಾಗಿ ಸರ್ಕಾರ ತಾತ್ಕಾಲಿಕ ತಡೆ ನಡೆ ಅನುಸರಿಸುತ್ತು. ಹಾಗಾಗಿ ಸಾಧಕ ಬಾಧಕಗಳನ್ನ ಚರ್ಚಿಸಿ ಮತ್ತೆ ಬಿಲ್‌ ಪುನರ್‌ ಪರಿಶೀಲನೆ ಮಾಡಿ ಇದೇ ಅಧಿವೇಶನದಲ್ಲಿ ಬಿಲ್‌ ಮಂಡಿಸಬೇಕೋ ಅಥವಾ ಬೇಡ್ವೋ..? ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

Tags:
error: Content is protected !!