Mysore
18
clear sky

Social Media

ಭಾನುವಾರ, 18 ಜನವರಿ 2026
Light
Dark

ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಜಾ.ದಳ ಸಜ್ಜು

ಬೆಂಗಳೂರು : ಹಾಸನದಲ್ಲಿ ಜಾ.ದಳ ಪಕ್ಷದ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಜಾ.ದಳ ಮುಂದಾಗಿದೆ. ಜ.24ರಂದು ಬೃಹತ್ ಸಮಾವೇಶ ನಡೆಸುವ ಮೂಲಕ ಜಾ.ದಳದ ನೆಲೆ ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಲು ಉದ್ದೇಶಿಸಿದ್ದು, ಸಮಾವೇಶದ ಪೂರ್ವ ಸಿದ್ಧತೆಗಳು ಬರದಿಂದ ಸಾಗಿವೆ.

ಸುಮಾರು 2 ಲಕ್ಷದಷ್ಟು ಜನರನ್ನು ಸೇರಿಸಿ ಸಮಾವೇಶ ಮಾಡಬೇಕು ಎಂಬುದು ಜಾ.ದಳ ವರಿಷ್ಠರ ನಿರ್ದೇಶನವಾಗಿದೆ. ಹೀಗಾಗಿ ಹಾಸನ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ತಾಲ್ಲೂಕು ಹಾಗೂ ವಿಧಾನಸಭೆ ಕ್ಷೇತ್ರವಾರು ಸಭೆಗಳನ್ನು ನಡೆಸುವ ಮೂಲಕ ಸಮಾವೇಶದ ರೂಪರೇಷೆ ಹಾಗೂ ಪೂರ್ವ ಸಿದ್ಧತೆಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಜಾ.ದಳ ಮೂಲಗಳು ತಿಳಿಸಿವೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಹಾಸನದಲ್ಲಿ ಎರಡು ಸಮಾವೇಶ ನಡೆಸುವ ಮೂಲಕ ಪಕ್ಷ ಬಲವರ್ಧನೆಗ ಮುಂದಾಗಿದೆ. ಇದರಿಂದ ಜಾ.ದಳ ಭದ್ರಕೋಟೆಗೆ ಕಾಂಗ್ರೆಸ್ ನುಗ್ಗುತ್ತಿದೆ ಎಂದು ಭಾವಿಸಿವ ಜಾ.ದಳ ನಾಯಕರು, ಕಾಂಗ್ರೆಸ್‌ಗಿಂತ ಜಾ.ದಳ ನೆಲೆ ಗಟ್ಟಿಯಾಗಿದೆ ಎಂಬುದನ್ನು ಬಹಿಂಗವಾಗಿ ತೋರಿಸುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ.

ಈಗಾಗಲೇ ಜಾ.ದಳ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಸಮಾವೇಶ ಕುರಿತು ಪಕ್ಷದ ಎರಡು -ಮೂರು ಸಭೆಗಳನ್ನು ನಡೆಸಿ ಸಲಹೆ-ಸೂಚನೆ ನೀಡಲಾಗಿದೆ. ಜಾ.ದಳ ನೆಲೆ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್‌ಗೆ ಸಮಾವೇಶದ ಮೂಲಕವೇ ತಿರುಗೇಟು ನೀಡಲು ತೀರ್ಮಾನಿಸಲಾಗಿದೆ.

Tags:
error: Content is protected !!