Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಜೆಡಿಎಸ್

ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಅಧಿಕಾರಿ ಎಂ.ಚಂದ್ರಶೇಖರ್‌ ಅವರು ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರದ ಮುಖಾಂತರ ಸಮರ ಸಾರಿದ್ದಾರೆ.

ಜನಪ್ರಿಯ ಬರ್ನಾರ್ಡ್‌ ಷಾ ಅವರ ಹೇಳಿಕೆಗಳಲ್ಲಿ ಒಂದಾಗಿರುವ ಹಂದಿಗೆ ಹೋಲಿಕೆಯಾಗುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇದೀಗ ಈ ಹೇಳಿಕೆಯನ್ನು ಖಂಡಿಸಿ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಸೇರಿದಂತೆ ಸ್ವತಃ ಕುಮಾರಸ್ವಾಮಿ ಅವರೇ ತಿರುಗೇಟು ನೀಡಿದ್ದಾರೆ.

ಎಂ.ಚಂದ್ರಶೇಖರ್ ಭೂವ್ಯವಹಾರವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಡು ಭ್ರಷ್ಟ ಅಧಿಕಾರಿ. 20 ಕೋಟಿಗೆ ಬೇಡಿಕೆ ಇಟ್ಟಿದ್ದ ಕಡು ಭ್ರಷ್ಟ ಅಧಿಕಾರಿ ನೀವೇ ಅಲ್ಲವೇ? ಈ ವಿಚಾರವಾಗಿ ನಿಮ್ಮ ವಿರುದ್ಧ ಇನ್ಸ್​ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಅಲ್ಲದೇ ಕೇಂದ್ರ ಸಚಿವರ ಬಗ್ಗೆ ಕೀಳುಮಟ್ಟದ ಪದ ಬಳಸಿರುವುದು ಅಕ್ಷಮ್ಯ. ನೀವೊಬ್ಬ ಐಪಿಎಸ್ ಅಧಿಕಾರಿಯಾಗಿರಲು ಅನರ್ಹ. ಬಹುಮಹಡಿ ವಾಣಿಜ್ಯ ಕಟ್ಟಡ ಎಷ್ಟು ಕೋಟಿ ಲಂಚ ಪಡೆದು ಕಟ್ಟುತ್ತಿದ್ದೀರಿ. ಬೆಂಗಳೂರಿನಲ್ಲಿ ನಿಮ್ಮ ಪತ್ನಿ ಹೆಸರಲ್ಲಿ ನಿರ್ಮಿಸುತ್ತಿರುವ ಬಹುಮಹಡಿ ಕಟ್ಟಡ. ರಾಜಕಾಲುವೆ ಮೇಲೆ ನಿರ್ಮಿಸುತ್ತಿರುವ ಬಹು ಮಹಡಿಯ ವಾಣಿಜ್ಯ ಕಟ್ಟಡ. ಕೆರೆ ಒತ್ತುವರಿ ಮಾಡಿಕೊಂಡ ಅಕ್ರಮಗಳ ಬಗ್ಗೆ ತನಿಖೆ ನಡೆಯಬೇಕಲ್ಲವೇ? ಎಂದು ಜೆಡಿಎಸ್‌  ಗಂಭೀರ ಆರೋಪ ಮಾಡಿದೆ.

ಎಡಿಜಿಪಿ ಚಂದ್ರಶೇಖರ್‌ ಪತ್ರದ ಮೂಲಕ ಸಮರಸಾರಿರುವ ವಿಚಾರವಾಗಿ ಟ್ವೀಟ್‌ ಮಾಡಿರುವ ಜೆಡಿಎಸ್‌, ಚಂದ್ರಶೇಖರ್‌ ಅವರೇ, ನಿಮ್ಮ ಮೇಲಿರುವ ಆರೋಪಗಳು ಸತ್ಯವಲ್ಲವೆಂದರೆ ನೀವು ಕಾನೂನಿ ಅಡಿಯಲ್ಲಿ ಉತ್ತರ ನೀಡಬಹುದಿತ್ತು. ಆದರೆ ನೀವು ಕಳ್ಳನ ಮನಸ್ಸು ಹುಳ್ಳಳ್ಳಗೆ ಅನ್ನೋ ರೀತಿಯಲ್ಲಿ ಪತ್ರದ ಮೂಲಕ ಉತ್ತರಿಸಿದ್ದೀರಾ?, ನೀವೋಬ್ಬ ಐಪಿಎಸ್‌ ಅಧಿಕಾರಿ ಎನ್ನುವುದನ್ನು ಮರೆತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕೋಪ, ಹತಾಶೆ ಮತ್ತು ಅಕ್ರೋಶದಿಂದ ಕೀಳುಮಟ್ಟದ ಪದಗಳನ್ನು ಬಳಸಿ ಉತ್ತರ ನೀಡಿದ್ದೀರಿ. ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಯಲು ಮಾಡಿದ್ದು ಅಪರಾಧವೇ ಎಂದು ಪ್ರಶ್ನೆ ಮಾಡಿದೆ.

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಒಬ್ಬರೂ ಭ್ರಷ್ಟ ಅಧಿಕಾರಿ ಈತನ ವಿರುದ್ಧವೂ ಅನೇಕ ದೂರುಗಳು ದಾಖಲಾಗಿದ್ದು, ಆರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ. ಅನೇಕ ಅಪರಾಧ ಮಾಡಿರುವ ಕಳಂಕಿತ ಅಧಿಕಾರಿಗಳಿಂದ ನ್ಯಾಯ ಸಮ್ಮತ, ಮುಕ್ತ ಮತ್ತು ಪಾರದರ್ಶಕ ತನಿಖೆ ಅಸಾಧ್ಯ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕೇಂದ್ರ ಸಚಿವರ ವಿರುದ್ಧ ಕೀಳುಮಟ್ಟದ ಪದ ಬಳಸಿರುವ ಹಾಗೂ ಭ್ರಷ್ಟಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ನಂತರ ಚಂದ್ರಶೇಖರ್‌ ಅವರ ಅಕ್ರಮಗಳ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕು ಎಂದು ಜೆಡಿಎಸ್‌ ಘಟಕ ಎಕ್ಸ್‌ ಖಾತೆಯಲ್ಲಿ ಒತ್ತಾಯಿಸಿದೆ.

Tags: