Mysore
26
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಮುರುಘಾ ಶ್ರೀಗಳಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ!

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ, ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ಚಿತ್ರದುರ್ಗದ ಸೆಂಟ್ರಲ್‌ ಜೈಲಿಗೆ ರವಾನಿಸಲಾಗಿದೆ.

ಜಿಲ್ಲಾ ಒಂದನೇ ಹೆಚ್ಚುವರಿ ಸೆಷನ್‌ ಕೋರ್ಟ್‌ ಮತ್ತೊಂದು ಪೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಮಠದ ಶ್ರೀಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಮತ್ತು ಅವರ ವಿಚಾರಣೆಯನ್ನು ಮೇ.27 ರಂದು ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ.

ಮುರುಘಾ ಶ್ರೀಗಳು 14 ತಿಂಗಳ ಜೈಲುವಾಸ ಅನುಭವಿಸಿದ ಬಳಿಕ ಅವರಿಗೆ ರಾಜ್ಯ ಉಚ್ಛ ನ್ಯಾಯಾಲಯ ನವೆಂಬರ್‌ 15, 2023ರಂದು ನಿರೀಕ್ಷಣ ಜಾಮೀನು ಮಂಜೂರು ಮಾಡಿತ್ತು. ಆದರೆ ಈಗ ಮತ್ತೊಂದು ಪ್ರಕರಣದಲ್ಲಿ ಶ್ರೀಗಳನ್ನು ಮತ್ತೊಂದು ಪಕ್ರಣದಲ್ಲಿ ಬಂಧಿಸಲಾಗಿದೆ.

Tags:
error: Content is protected !!