ಟೆಹರಾನ್: ಅಮೇರಿಕಾ ಜೊತೆ ಮಾತುಕತೆ ನಡೆಸಲು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ.
ಯುದ್ಧವನ್ನು ರಾಜತಾಂತ್ರಿಕತೆ ಮೂಲಕ ನಿಲ್ಲಿಸಲು ಸಜ್ಜಾಗಿದ್ದ ಅಮೇರಿಕಾಗೆ ಈಗ ಇರಾನ್ ಮತ್ತೊಂದು ಕಪಾಳಮೋಕ್ಷ ಮಾಡಿದೆ.
ಇರಾನ್ ಒಡ್ಡುತ್ತಿರುವ ಪ್ರತಿರೋಧಕ್ಕೆ ಅಮೇರಿಕಾ ಈಗ ಬಳಲಿ ಬಳಲಿ ಬೆಂಡಾಗಿದ್ದು, ಇರಾನ್ ಪ್ರತಿರೋಧದಿಂದ ಅಮೇರಿಕಾದ ಮಿಲಿಟರಿಯ ಪ್ರಮುಖ ಅಧಿಕಾರಿಗಳ ತಲೆದಂಡವಾಗುತ್ತಿದೆ.
ನಾವು ಅಮೇರಿಕಾದ ಅಧಿಕಾರಿಗಳೊಂದಿಗೆ ಮಾತುಕತೆಗೆ ಕೂರಲು ಸಿದ್ಧರಿಲ್ಲ. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಬೆಳವಣಿಗಳ ಬಗ್ಗೆ ಇರಾನ್‌ಗೆ ಒಪ್ಪಿಗೆ ಇಲ್ಲ ಎಂದು ಹೇಳಿದೆ.
ಇನ್ನು ಮಾಹಿತಿಯ ಪ್ರಕಾರ ಮಾತುಕತೆ ನಡೆಸುವುದರಲ್ಲಿ ಪಾಕಿಸ್ತಾನ ವಿಫಲವಾದ ಬೆನ್ನಲ್ಲೇ ಟರ್ಕಿ ಹಾಗೂ ಈಜಿಪ್ಟ್ ಸಮಸ್ಯೆ ನಿವಾರಣೆಯ ಪ್ರಯತ್ನ ಆರಂಭಿಸಿವೆ. ಉಭಯ ದೇಶಗಳ ನಡುವೆ ಮಾತುಕತೆಯ ಪ್ರಕ್ರಿಯೆ ಆರಂಭಿಸಲು ಆತಿಥ್ಯ ವಹಿಸಲು ಹೊಸ ತಾಣಗಳನ್ನು ಪ್ರಸ್ತಾಪಿಸಲು ಈ ದೇಶಗಳು ಮುಂದಾಗಿವೆ. ಕದನ ವಿರಾಮ ಮಾತುಕತೆಗೆ ವೇದಿಕೆಯಾಗಲು ಕತಾರ್ ಹಾಗೂ ಇಸ್ತಾಂಬುಲ್ ಉತ್ಸುಕತೆ ತೋರಿವೆ ಎಂದು ಹೇಳಲಾಗಿದೆ.





