Mysore
22
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

IPL | ಈ ಬಾರಿಯೂ ಕಪ್‌ ಗೆಲ್ಲಲು ಪರಿಶ್ರಮ ಅಗತ್ಯ ; ಆಟಗಾರರಿಗೆ ಕಿಂಗ್‌ ಕೊಹ್ಲಿ ಸಲಹೆ

ಬೆಂಗಳೂರು : ಇದೇ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್-2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದೆ.

ತಂಡದ ಸಹ ಆಟಗಾರರೊಂದಿಗೆ ಮಾತನಾಡಿರುವ ಕೊಹ್ಲಿ, ಕಳೆದ 2-3 ಸೀಸನ್‌ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ. ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್‌ಗೂ 120 ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ ಮುಖ್ಯ ಎಂದು ತಂಡವನ್ನು ಕೊಹ್ಲಿ ಹುರಿದುಂಬಿಸಿದ್ದಾರೆ.

ಆರ್‌ಸಿಬಿ ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವುದರಿಂದ ಒತ್ತಡ ಹೆಚ್ಚಾಗಲಿದೆ. ಈ ಕಾರಣಕ್ಕೇ ಸಹ ಆಟಗಾರರಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆ. ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಕೂಡ ಹೊಸ ಆಟಗಾರರ ಸೇರ್ಪಡೆಯಿಂದ ತಂಡ ಮತ್ತಷ್ಟು ಬಲವಾಗಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

 

Tags:
error: Content is protected !!