Mysore
16
few clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇಂದು ತುಂಗಭದ್ರಾ ಜಲಾಶಯಕ್ಕೆ ತಾತ್ಕಾಲಿಕ ಗೇಟ್‌ ಅಳವಡಿಕೆ?

ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ ಮುರಿದಿದ್ದ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ತಾತ್ಕಾಲಿಕ ಗೇಟ್‌ ಅಳವಡಿಸುವ ಕೆಲಸ ಮಂಗಳವಾರ (ಆ.13) ಸಂಜೆಯಿಂದ ನಡೆಯಲಿದೆ.

ತುಂಗಭದ್ರಾ ಡ್ಯಾಂನ ಗೇಟ್‌ ಮುರಿದುಬಿದ್ದ ಕಾರಣ ನೀರು ಎತೇಚ್ಚವಾಗಿ ಪೋಲಾಗುತ್ತಿತ್ತು. ಇದನ್ನು ತಡೆಯಲು ನೀರಾವರಿ ನಿಗಮ ಕ್ರಮ ಕೈಗೊಂಡಿದ್ದು, ನೀರಿನಲ್ಲಿಯೇ ಗೇಟ್‌ ಅಳವಡಿಸುವ ಕಾರ್ಯಕ್ಕೆ ತಜ್ಞರ ತಂಡ ಮುಂದಾಗಿದೆ.

ಈಗ ತಾತ್ಕಾಲಿಕವಾಗಿ ಅಳವಡಿಸಲಿರುವ ಗೇಟ್‌ 48 ಟನ್‌ ತೂಕದ ಈ ಗೇಟ್‌ 20 ಅಡಿ ಅಗಲ, 60 ಅಡಿ ಎತ್ತರದ್ದಾಗಿದೆ. ಇನ್ನು ಈ ಗೇಟ್‌ ಪರಿಶೀಲನೆ ಮಾಡಲು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.

ಗೇಟ್‌ ಮುರಿದಿರುವ ಕಾರಣ ಟಿಬಿ ಡ್ಯಾಂನಿಂದ ನೀರು ಹೊರ ಬರುತ್ತಿದ್ದು, ನದಿ ಪಾತ್ರದ ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇನ್ನು ಇಲ್ಲಿಯವರೆಗೆ 20 ಟಿಎಂಸಿ ನೀರು ನದಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:
error: Content is protected !!