ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಸಿದ್ದರಾಮಯ್ಯ ನಿಜವಾದ ಕನ್ನಡಿಗರು, ಮೂಲ ನಿವಾಸಿಗಳಿಗೆ ವಸತಿ ಕೊಡುವುದು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂಗೆ ವಾರ್ನಿಂಗ್ ಮಾಡಿದ್ದರಿಂದ ಲೋಕಲ್ ಅಲ್ಲದೇ ಇರುವವರಿಗೆ ಮನೆ ಕೊಡುತ್ತಾ ಇದ್ದಾರೆ. ಅವರೆಲ್ಲಾ ಯಾವ ದೇಶದವರು ಅಂತಾ ತನಿಖೆ ಮಾಡದೇ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ಕೊಡುವ ನಿರ್ಧಾರ ಮಾಡುತ್ತಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಇದ್ದಾರೆ ಅವರನ್ನು ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಿ ಎಂದು ಆಗ್ರಹಿಸಿದರು.




