ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಿಗೆ ನೂತನ ಸ್ಪರ್ಶ ನೀಡಲು ಮುಂದಾಗಿರುವ ಬಿಬಿಎಂಪಿ, ಎಲ್ಲಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ಕೊಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ನೂತನ ಮಾರ್ಗ ಅನುಸರಿಸಿದೆ.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಲ್‌ಇಡಿ ಮಾದರಿಯ ಮಿಷಿನ್ ಸ್ಕ್ರೀನ್ ಅಳವಡಿಸಿ ಅದರಲ್ಲಿಯೇ ಊಟ ಆರ್ಡರ್ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಪೂರಕವಾಗಿ ಮೊದಲಿಗೆ ರಾಜರಾಜೇಶ್ವರಿ ನಗರದ 11 ಕ್ಯಾಂಟೀನ್‌ಗಳಲ್ಲಿ ಅನುಷ್ಠಾನಕ್ಕೆ ಬಿಬಿಎಂಪಿ ಮುಂದಾಗಿದೆ.
ಊಟದ ಆರ್ಡರ್ ವ್ಯವಸ್ಥೆ, ಪಾರ್ಸಲ್, ದೂರುಗಳನ್ನು ದಾಖಲಿಸಲು ಈ ಆನ್‌ಲೈನ್ ಸೇವೆ ಸಹಾಯಕಾರಿಯಾಗಲಿದೆ ಎಂದು ಹೇಳಲಾಗಿದೆ.





