Mysore
14
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಶೀಘ್ರದಲ್ಲೇ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ದೇಶವಾಗಲಿದೆ: ಪ್ರಧಾನಿ ಮೋದಿ ವಿಶ್ವಾಸ

pm (3)

ಬೆಂಗಳೂರು: ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಬೆಂಗಳೂರು ಅಧಿದೇವತೆ ಅಣ್ಣಮ್ಮ ತಾಯಿಗೆ ನಮನಗಳು. ನಾಡಪ್ರಭು ಕೆಂಪೇಗೌಡರಿಗೆ ನಮನಗಳು ಎಂದು ಸ್ಮರಿಸಿ ಬೆಂಗಳೂರು ಮಹಾನಗರ ಭವಿಷ್ಯದ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದರು.

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆಪರೇಷನ್‌ ಸಿಂಧೂರ ನಡೆಸಿ ಭಾರತ ವಿಶ್ವರೂಪದರ್ಶಿಸಿದೆ. ಇಡೀ ಜಗತ್ತು ನವ ಭಾರತದ ರೂಪವನ್ನು ಕಂಡಿದೆ. ಮೇಕ್ ಇನ್‌ ಇಂಡಿಯಾ ಶಕ್ತಿಯನ್ನು ತೋರಿಸಿದ್ದೇವೆ. ಆಪರೇಷನ್‌ ಸಿಂಧೂರ ಬಳಿಕ ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಆಪರೇಷನ್‌ ಸಿಂಧೂರ ಸಫಲತೆಯ ಹಿಂದೆ ಮೇಕ್‌ ಇನ್‌ ಇಂಡಿಯಾ ಶಕ್ತಿ ಇದೆ. ಇದರಲ್ಲಿ ಬೆಂಗಳೂರು, ಕರ್ನಾಟಕದ ಯುವ ತಂತ್ರಜ್ಞಾನ ಇದೆ ಎಂದು ಹೇಳಿದರು.

ಬೆಂಗಳೂರು ನಗರ ನವ ಭಾರತದ ಸಂಕೇತವಾಗಿದೆ. ಗ್ಲೋಬಲ್‌ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಬೆಂಗಳೂರು ನಗರದ ಯಶಸ್ವಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣವಾಗಿದೆ. ಭವಿಷ್ಯಕ್ಕಾಗಿ ಬೆಂಗಳೂರಿನಂತಹ ನಗರಗಳನ್ನು ರೂಪಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡುತ್ತಿದೆ ಎಂದು ಹೇಳಿದರು.

ಬೆಂಗಳೂರನ್ನು ಭವಿಷ್ಯದ ದಿನಕ್ಕಾಗಿ ರೂಪಿಸಬೇಕಾಗಿದೆ. ಬೆಂಗಳೂರು ನಗರ ಹೊಸ ಭಾರತದ ರೂಪಕ. ಜಾಗತಿಕ ಐಟಿ ಕ್ಷೇತ್ರದಲ್ಲಿ ಛಾಪು ಮೂಡಿಸಿದೆ. ನಿಮ್ಮೆಲ್ಲರ ಶ್ರಮ. ಪ್ರತಿಭೆಯಿಂದ ಇದರ ಹಿಂದೆ ಇದೆ. ನಗರ ದಕ್ಷ ಸುರಕ್ಷಿತವಾಗಿದ್ದರೆ ನಾವು ಅಭಿವೃದ್ಧಿ ಹೊಂದುತ್ತೇವೆ. ಶೀಘ್ರದಲ್ಲೇ ಭಾರತ ವಿಶ್ವದ ಅತಿದೊಡ್ಡ ಮೂರನೇ ಆರ್ಥಿಕತೆ ದೇಶವಾಗಲಿದೆ. 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಂದಿದ್ದೇವೆ. ಶೀಘ್ರವೇ ಭಾರತದ ಆರ್ಥಿಕತೆ ವಿಶ್ವದ ಅತಿದೊಡ್ಡ ಮೂರನೇ ಆರ್ಥಿಕತೆ ದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:
error: Content is protected !!