ಗದಗ: ನಮ್ಮ ದೇಶದಲ್ಲಿ ಬರೀ ಹಿಂದುಗಳಿಲ್ಲಾ, ಕ್ರಿಶ್ಚಿಯನ್, ಮುಸ್ಲಿಂ, ಜೈನರು, ಬೌದ್ಧರು ಎಲ್ಲರೂ ಇದ್ದಾರೆ. ಕೇವಲ ಹಿಂದೂ ರಾಷ್ಟ್ರ ಎಂದು ಘೋಷಿಸಲು ಆಗುವುದಿಲ್ಲ. ಇದು ಬಿಜೆಪಿ ಸಿದ್ಧಾಂತ. ಭಾರತವನ್ನು ಹಿಂದೂಗಳ ರಾಷ್ಟ್ರ ಮಾಡಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಉಳಿಯಬೇಕಾದರೇ ಹಿಂದೂ ರಾಷ್ಟ್ರವಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿಕೆಗೆ ಇದು ಬಿಜೆಪಿಯ ಘೋಷ ವಾಕ್ಯವಾಗಿದ್ದು, ೧೯೫೦ರಲ್ಲೊ ಜನಸಂಗ ಪ್ರಾರಂಭವಾದಾಗಲೇ ಹಿಂದೂ ರಾಷ್ಟ್ರವಾಗಬೇಕು ಎಂದು ಹೇಳಿದ್ದರು. ಆದರೆ ಹಿಂದೂ ದೇಶ ಮಾಡಲು ಆಗುವುದಿಲ್ಲ ಎಂದು ಸಿಎಂ ಹೇಳಿದರು.
ಇನ್ನೂ ಜನ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಎಬಿವಿಪಿ ಆರೋಪಕ್ಕೆ, ಸುಳ್ಳು ಹೇಳುವುದೇ ಅವರ ಕೆಲಸ. ಬಿಜೆಪಿ ಸಂಘ ಪರಿವಾರದ ಎಬಿವಿಪಿ, ಭಜರಂಗದಳ, ಯುವ ಮೋರ್ಚಾ ಎಲ್ಲವೂ ಸುಳ್ಳಿನ ಕಾರ್ಖಾನೆಗಳು ಎಂದು ತಿಳಿಸಿದರು.





