Mysore
22
haze

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಅಪೂರ್ಣ ರಾಮಮಂದಿರ ಉದ್ಘಾಟನೆ ರಾಮನಿಗೂ ನೋವು ತಂದಿದೆ : ಕಾಗಿನೆಲೆ ಸ್ವಾಮೀಜಿ

ರಾಯಚೂರು: ತರಾತುರಿಯಲ್ಲಿ ಅಪೂರ್ಣ ರಾಮಮಂದಿರ ಉದ್ಘಾಟನೆ ಮಾಡಲು ಹೊರಟಿರುವುದು ರಾಮನಿಗೂ ನೋವು ತಂದಿದೆ ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ದೇವದುರ್ಗ ತಾಲೂಕಿನ ಸಂಸ್ಥಾನ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳು ಅಪಸ್ವರ ಎತ್ತಿರುವುದು ಸರಿ ಎನಿಸುತ್ತದೆ.

ಯಾವುದೇ ದೇವಸ್ಥಾನ ಪೂರ್ಣವಾಗಿ ನಿರ್ಮಾಣವಾದ ನಂತರ ಉದ್ಘಾಟನೆ ಮಾಡಬೇಕು. ತರಾತುರಿಯಲ್ಲಿ ಉದ್ಘಾಟನೆ ಮಾಡಿದರೆ ಬೇರೆ ಯಾವುದೋ ಉದ್ದೇಶ ಹೊಂದಿರುವುದು ಕಾಣುತ್ತದೆ ಎಂದ ಅವರು, ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕನಕ ಗುರುಪೀಠಕ್ಕೂ ಆಹ್ವಾನ ಬಂದಿದೆ’ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!