Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ: ಏರೋ ಇಂಡಿಯಾ 2025ಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ 2025ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧಿಕೃತ ಚಾಲನೆ ನೀಡಿದರು.

ಇಲ್ಲಿನ ಏರ್‌ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್‌ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏರೋ ಇಂಡಿಯಾ 2025ಕ್ಕೆ ಅಧಿಕೃತ ಚಾಲನೆ ನೀಡಿದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು, ಅಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಲ್ಲಿ ಏರೋ ಇಂಡಿಯಾ ಮಹಾಕುಂಭ ನಡೆಯುತ್ತಿದೆ. ಒಂದು ಕಡೆ ಪರಂಪರೆ, ಸಂಸ್ಕೃತಿ ಮಹಾಕುಂಭ ಆಗುತ್ತಿದೆ. ಇನ್ನೊಂದು ಕಡೆ ಅತ್ಯಾಧುನಿಕ, ತಂತ್ರಜ್ಞಾನದ ಯುದ್ಧೋಪಕರಣ, ವಿಮಾನಗಳ ಮಹಾಕುಂಭ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾವು ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಕಾರ್ಯ ಮಾಡಬೇಕಿದೆ. ಶಾಂತಿ, ಶಕ್ತಿ ನಮ್ಮ ಮಂತ್ರಬಲ ಆಗಬೇಕಿದೆ. ನಾವು ಇನ್ನಷ್ಟು ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಪ್ರದರ್ಶಿಸಬೇಕಾಗಿದೆ. ಅದಕ್ಕಾಗಿಯೇ ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,080 ಕೋಟಿ ರೂ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.

 

 

Tags:
error: Content is protected !!