ಬೆಂಗಳೂರು : ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹಾಡಹಗಲೇ ಬಿಎಂಡಬ್ಲ್ಯೂ ಕಾರಿನ ಗಾಜನ್ನು ಒಡೆದು 13 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ನಗರದ ಸಜಾರ್ಪುರ ಬಳಿ ವರದಿಯಾಗಿದೆ.
ಸೋಂಪುರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ನಿಂತಿದ್ದ ಕಾರಿನ ಗಾಜು ಒಡೆಯುವ ಕಳ್ಳರು, ಹಣ ಕಳ್ಳತನ ಮಾಡುವ ದೃಶ್ಯಗಳು ಪಕ್ಕದ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.





