ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್ ತೆರವಿನ ಹಿನ್ನೆಲೆಯಲ್ಲಿ ಮನೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿರಾಶ್ರಿತರಿಗೆ ನಾಳೆಯೇ ಜಿಬಿಎ, ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳ ವಿತರಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮಾತನಾಡಿದ ಸಚಿವ ಭೈರತಿ ಸುರೇಶ್ ಅವರು, ಸ್ಥಳೀಯರು ಅರ್ಹರಿಗೆ ಮಾತ್ರ ಮನೆ ಕೊಡುತ್ತೇವೆ. ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ಪರಿಶೀಲನೆ ವೇಳೆ 90 ಜನ ಮಾತ್ರ ಸ್ಥಳೀಯರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ 90 ಫಲಾನುಭವಿಗಳಿಗೆ ಮಾತ್ರ ಮನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.





