ಬೆಂಗಳೂರು: ಅಕ್ರಮ ಆಸ್ತಿಗಳಿಗೆ ಪ್ರಕರಣ ಸಂಬಂಧ ವಸತಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸ್ ನೀಡಿರುವ ನೋಟಿಸ್‌ನಲ್ಲಿ ಡಿಸೆಂಬರ್ 3 ರಂದು ಆಸ್ತಿಗಳಿಕೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಜಮೀರ್ ಅಹಮದ್ ವಿರುದ್ಧ ಮೂರು ವರ್ಷಗಳ ಹಿಂದೆ ಇಡಿ ಅಧಿಕಾರಿಗಳು ಅಕ್ರಮ ಆಸ್ತಿಗಳಿಕೆ ವಿಚಾರವಾಗಿ ಎಸಿಬಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಎಸಿಬಿ ರದ್ದಾದ ನಂತರ ಲೋಕಾಯುಕ್ತ ಈ ಪ್ರಕರಣವನ್ನು ಕೈಗತ್ತಿಕೊಂಡಿದ್ದು, ಇದೀಗ ಇಡಿ ವರದಿ ಆಧಾರದ ಮೇಲೆ ಲೋಕಾಯುಕ್ತ ನೋಟಿಸ್ ನೀಡಿದೆ.