ಉಡುಪಿ : ಹಿಂದೊಮ್ಮೆ ವರನಟ ಡಾ.ರಾಜ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಒದಗಿತ್ತು, ಆದರೆ ಅಣ್ಣವ್ರು ಅದನ್ನು ನಯವಾಗಿ ನಿರಾಕರಿಸಿದ್ರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಳೆಯ ನೆನಪನ್ನು ಮೆಲುಕು ಹಾಕಿದರು.
ಅದು ದಕ್ಷಿಣ ಭಾರತದಲ್ಲಿ ನಟರು ರಾಜಕೀಯ ಪ್ರವೇಶಿಸಿದ ಸಂದರ್ಭ, ಆಂದ್ರಪ್ರದೇಶದಲ್ಲಿ ಎನ್.ಟಿ ರಾಮ್‌ರಾವ್, ತಮಿಳುನಾಡಿನಲ್ಲಿ ಎಂಜಿಆರ್ ರಾಜಕೀಯಕ್ಕೆ ಬಂದಿದ್ದರು. ಅದೇ ರೀತಿ ಕರ್ನಾಟಕದಲ್ಲೂ ಡಾ.ರಾಜ್‌ಕುಮಾರ್ ರಾಜಕೀಯಕ್ಕೆ ಬಂದರೆ ಇಲ್ಲಿನ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಮಾತುಗಳಿದ್ದವು.
ಅದಕ್ಕಾಗಿ ನಾವು ರಾಜ್ ಕುಮಾರ್ ಹಾಗೂ ಪಾರ್ವತಮ್ಮರನ್ನ ದೆಹಲಿಗೆ ಕರೆದುಕೊಂಡಿ ಹೋಗಿ ಇಂದಿರಾ ಗಾಂಧಿಯನ್ನು ಭೇಟಿ ಮಾಡಿಸಿ ಮಾತುಕತೆ ನಡೆಸಿದ್ದೇವು, ಆದರೆ ಡಾ.ರಾಜ್‌ಕುಮಾರ್ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ ಮುಖ್ಯಮಂತ್ರಿ ಅವಕಾಶವನ್ನು ನಯವಾಗಿ ನಿರಾಕರಿಸಿದ್ದರು.
ಬಳಿಕ ರಾಜ್ಯಸಭಾ ಸದಸ್ಯತ್ವ ಸ್ವೀಕರಿಸುವಂತೆ ಇಂದಿರಾಗಾಂಧಿ ಕೇಳಿಕೊಂಡರು. ಅದನ್ನು ಕೂಡ ತಿರಸ್ಕರಿಸಿದ ತ್ಯಾಗಜೀವಿ ಡಾ.ರಾಜ್‌ಕುಮಾರ್ ಎಂದು ಶಿವರಾಜ್ ಕುಮಾರ ಸಮ್ಮುಖದಲ್ಲೇ ಮೊಯ್ಲಿ ಹಳೆಯ ನೆನಪನ್ನು ಸ್ಮರಿಸಿದರು.
ರಾಜ್‌ಕುಮಾರ್ ಅಂದಿನ ಕಾಲದಲಿ ರಾಜಕೀಯಕ್ಕೆ ಬಂದಿದ್ದರೆ ಇಂದಿಗೂ ಕರ್ನಾಟಕ ರಾಜಕೀಯದಲ್ಲಿ ರಾರಾಜಿಸುತ್ತಿದ್ದರು ಎಂದು ಹೇಳಿದರು.