Mysore
32
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಕುಮಾರಸ್ವಾಮಿ ಇಲ್ಲದೇ ಹೋಗಿದ್ರೆ ಜಿಟಿಡಿ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು: ರೇವಣ್ಣ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್‌ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೇ ಹೋಗಿದ್ದರೆ, ಜಿ. ಟಿ. ದೇವೇಗೌಡ ಮತ್ತು ಅವರ ಪುತ್ರ ಜೈಲಿನಲ್ಲಿ ಕಾಲ ಕಳೆಯಬೇಕಾಗಿತ್ತು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ 2017 ರಲ್ಲಿ ಜಿ.ಟಿ. ದೇವೇಗೌಡ ಅವರನ್ನು‌ ಆರೆಸ್ಟ್ ಮಾಡಲು ಯೋಜನೆ ಹಾಕಿಕೊಂಡಿತು. ಈ ವಿಷಯ ಪೋಲಿಸ್‌ ಅಧಿಕಾರಿಗಳ ಮುಖಾಂತರ ನನಗೆ ಮುಟ್ಟಿತ್ತು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಕರೆ ಮಾಡಿ ಮಾತನಾಡಿದಾಗ, ಪೋಲಿಸರು ಜಿಟಿಡಿ ಅರೆಸ್ಟ್‌ ಮಾಡುವುದಕ್ಕೆ ಹಿಂದೇಟು ಹಾಕಿದರು. ಇಲ್ಲದೇ ಹೋಗಿದ್ರೆ ಜಿಟಿಡಿ ಮತ್ತು ಅವರ ಪುತ್ರ ನನ್ನ ಹಾಗೇ 20 ದಿನ ಜೈಲಿನಲ್ಲಿ ಕಳೆಯಬೇಕಾಗುವ ಸಂಭವವಿರುತ್ತಿತ್ತು ಎಂದು ಹೇಳಿದರು.

ಯಾವ ಕೇಸ್‌ ವಿಚಾರದಲ್ಲಿ ಎಂಬ ಪತ್ರಕರ್ತರ ಪ್ರಶ್ನೆಗೆ, ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ನಾಯಕರನ್ನು ಕೇಳಿ ಅಂತ ಕಾಂಗ್ರೆಸ್ ಮೇಲೆ ‌ ರೇವಣ್ಣ ಆರೋಪ ಮಾಡಿದರು.

ಇದೇ ವೇಳೆ ಜೆಡಿಎಸ್‌ ನಾಯಕ ಸುರೇಶ್‌ ಬಾಬು ಮಾತನಾಡಿ, ಜಿ.ಟಿ ದೇವೇಗೌಡರಿಗೆ ಪಕ್ಷದ ನಾಯಕರ ಮೇಲೆ ಅಸಮಾಧಾನ ಇರುವುದು ನಿಜ. ಆದರೆ ಅವರು ಕುರಿತು ಮಾತನಾಡಿದರೆ ಎಲ್ಲವೂ ಸರಿಯಾಗುತ್ತದೆ, ಮುಂದೆ ಸರಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

Tags:
error: Content is protected !!