Mysore
19
overcast clouds
Light
Dark

ಈಶ್ವರಪ್ಪನವರ ಮಗನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ: ಯಡಿಯೂರಪ್ಪ

ಶಿವಮೊಗ್ಗ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಲಾಬಿ ಶುರುವಾಗಿದೆ. ಬಿಜೆಪಿಯ ಬಿ.ಸಿ.ಪಾಟೀಲ್, ಜಗದೀಶ್ ಶೆಟ್ಟರ್ , ಶಾಸಕ ಬಸವರಾಜ ಬೊಮ್ಮಯಿ ಹಾಗೂ ಈಶ್ವರಪ್ಪ ಪುತ್ರ ಕಾಂತೇಶ್ ಅವರ ಮಧ್ಯೆ ಟಿಕೆಟ್ ಪೈಪೋಟಿ ಏರ್ಪಟ್ಟಿದ್ದು, ಈ ವಿಚಾರದ ಸಲುವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂತೇಶ್‌ಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ ಅಭಿಮಾನಿಗಳು ಹಾಗೂ ಕುರುಬ ಸಮಾಜದ ಮುಖಂಡರು ಬಿಎಸ್‌ವೈ ಮನೆಗೆ ಭೇಟಿ ನೀಡಿ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪತ್ರಿಕ್ರಿಯಿಸಿದ ಯಡಿಯೂರಪ್ಪ ಮಾ.9 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರವರ ಮನೆಗೆ ಕಳುಹಿಸಿದ್ದೆ ಮತ್ತು ದೆಹಲಿಯಲ್ಲಿ ಅಮಿತ್ ಶಾರವರು ನನ್ನ ಜೊತೆ ಈಶ್ವರಪ್ಪ ಅವರನ್ನೂ ಸಹ ಚರ್ಚಿಸಲು ಬರ ಹೇಳಿದ್ದಾರೆ ಎಂದು ಹೇಳಿದ್ದಾರೆ.

ನಾನೇ ಖುದ್ದಾಗಿ ಅವರ ಜೊತೆಗೆ ನಿಲ್ಲುತ್ತೇನೆ ನಾನು ಬೇರೆ ಅಲ್ಲ, ಈಶ್ವರಪ್ಪ ಬೇರೆ ಅಲ್ಲ. ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಪ್ರಾಮಾಣಿಕವಾಗಿ ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತೇನೆ ಎಂದು ಭರವಸೆ ನೀಡಿದ್ದಾರೆ.
ಈ ದಿನ ನಡೆಯಬೇಕಿದ್ದ ಬಿಜೆಪಿ ಸಿಇಪಿ ಸಭೆಯನ್ನು ಮುಂದೂಡಲಾಗಿದ್ದು, ಈ ವಿಷಯದ ಬಗ್ಗೆ ಮಾತನಾಡಿದ ಅವರು ಸಭೆಯಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಬಹುದು ಹಾಗಾಗಿ ಒಂದು ದಿನ ಮುಂದೂಡಿ ನಾಳೆ ಮತ್ತೆ ಚುನಾವಣಾ ಸಮಿತಿ ಸಭೆಯನ್ನು ಕರೆಯಬಹುದು ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ