ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೂನ್. 17 ರಂದು ಹಾಜರಾಗುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿಂದು (ಜೂನ್.15) ಮಾತನಾಡಿರುವ ಬಿಎಸ್‌ವೈ, ಪೋಕ್ಸೋ ಪ್ರಕರಣದಡಿ ನಾನು ಯಾರನ್ನು ದೂರುವುದಿಲ್ಲ. ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿದ್ದೆ. ವಿಚಾರಣೆಗೆ ಜೂನ್. 17 ರಂದು ಹಾಜರಾಗುವುದಾಗಿ ಹೇಳಿದ್ದೆ. ಅದರಂತೆ ಸೋಮವಾರ ತಪ್ಪದೇ ಹಾಜರಾಗುತ್ತೇನೆ ಎಂದರು.
ಹಲವಾರು ಜನರು ಪೋಕ್ಸೋ ಪ್ರಕರಣದಲ್ಲಿ ಅನವಶ್ಯಕ ಗೊಂದಲ ಸೃಷ್ಠಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ಕಾಲವೇ ತೀರ್ಮಾನ ಮಾಡಲಿದೆ. ಸತ್ಯ ಏನು ಎಂಬುದನ್ನು ಜನರೇ ತಿಳಿದಿದ್ದಾರೆ. ಕುತಂತ್ರ ಮಾಡುವವರಿಗೆ ಜನರು ಈಗಾಗಲೇ ಬುದ್ದಿ ಕಲಿಸಿದ್ದಾರೆ ಎಂದು ಮಾಜಿ ಸಿಎಂ ಬಿಎಸ್‌ವೈ ಹೇಳಿದರು.