ಬೆಂಗಳೂರು : ಕನ್ನಡ ತಮಿಳಿನಿಂದ ಹುಟ್ಟಿರುವುದು ಎಂದು ಹೇಳಿಕೆ ನೀಡಿದ ಬಹುಭಾಷ ನಟ ಕಮಲ್ ಹಾಸನ್ ವಿರುದ್ಧ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಹಾದಿಯಾಗಿ ಹಲವು ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು ತೀವ್ರ ಟೀಕೆಗೈದಿದ್ದಾರೆ.
ಪ್ರತಿಭಟನೆ ಸ್ವರೂಪ ಪಡೆಯುತ್ತಿದ್ದಂತೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಕಮಲ್ ಹಾಸನ್, ನಾನು ಕನ್ನಡದ ಬಗ್ಗೆ ನೀಡಿದ ಹೇಳಿಕೆ ಪ್ರೀತಿಯಿಂದ ನೀಡಿದ್ದಾಗಿದ್ದು, ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡಲು ಅರ್ಹರಲ್ಲಿ ಎಂದಿದ್ದಾರೆ.
ಹಲವು ಇತಿಹಾಸಕಾರರು ನನಗೆ ಭಾಷೆಯ ಇತಿಹಾಸ ಹೇಳಿದ್ದಾರೆ. ಅದು ನನ್ನ ಅಭಿಪ್ರಾಯವಲ್ಲ. ತಮಿಳುನಾಡು ವಿರಳ ರಾಜ್ಯ. ಒಬ್ಬ ರೆಡ್ಡಿ, ಮೆನನ್, ಮಂಡ್ಯದ ಅಯ್ಯಂಗಾರ್ ಇಲ್ಲಿ ಸಿಎಂ ಗಳಾಗಿದ್ದಾರೆ. ನನ್ನ ಹೇಳಿಕೆ ಬಗ್ಗೆ ಕನ್ನಡಿಗರೆ ಉತ್ತರ ಕೊಡುತ್ತಾರೆ. ಭಾಷೆಯ ಬಗ್ಗೆ ಮಾತನಾಡಲು ನಾನೂ ಸೇರಿದಂತೆ ರಾಜಕಾರಣಿಗಳು ಅರ್ಹರಲ್ಲ. ರಾಜಕಾರಣಿಗಳಿಗೆ ಅಷ್ಟು ವಿದ್ಯಾಭ್ಯಾಸ ಇಲ್ಲ. ಈ ಕುರಿತಾಗಿ ಇತಿಹಾಸಕಾರರು ಹಾಗೂ ಭಾಷಾತಜ್ಞರಿಗೆ ಚರ್ಚೆ ಮಾಡಲು ಬಿಡೋಣ ಎಂದು ಹೇಳಿದ್ದಾರೆ.





