ಗೋಕಾಕ್: ನನ್ನ ಮಗ ರಾಕೇಶ್ ಮೃತರಾದಾಗ ಸಹಾಯಕ್ಕಾಗಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ಅವರ ಹತ್ತಿರ ಮಾತನಾಡಿಲ್ಲ ಹಾಗೂ ನಾನು ಇದರಲ್ಲಿ ಯಾರ ಸಹಾಯವು ಪಡೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಅವರ ಮಗ ಮೃತರಾದಾಗ ಮೋದಿ ಅವರು ಮಾಡಿದ ಸಹಾಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಮೋದಿಯವರ ಜೊತೆ ಮಾತನಾಡಿ ಸಹಾಯ ಪಡೆದ ಸಿದ್ದರಾಮಯ್ಯ ಇಂದು ಪ್ರಜ್ವಲ್ ವಿಷಯದಲ್ಲಿ ಮೋದಿಯನ್ನು ಎಳೆದು ತರುತ್ತಿದ್ದಾರೆ ಎಂಬ ಎಚ್.ಡಿ ಕುಮಾರಸ್ವಾಮಿ ಮಾತಿಗೆ ಗೋಕಾಕದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನನ್ನ ಮಗ ವಿದೇಶದಲ್ಲಿ ಮೃತಪಟ್ಟಿದ್ದ. ಮೃತದೇಹ ಇಲ್ಲಿಗೆ ತರಿಸಿ ಅಂತ್ಯಕ್ರಿಯೆ ಮಾಡಿದ್ದೇವೆ. ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಮೋದಿ ಹಾಗೂ ಬೇರೆ ಯಾರನ್ನೇ ಆಗಲಿ ಸಂಪರ್ಕಿಸುವ ಅವಶ್ಯಕತೆಯೆ ಬಂದಿಲ್ಲ. ಇವರೆಲ್ಲ ಸುಳ್ಳು ಹೇಳುತ್ತಿದ್ದಾರೆ ಎಂದರು.
ಪ್ರಜ್ವಲ್ ಪ್ರಕರಣ ಕುರಿತು ಎಸ್‌ಐಟಿ ವರದಿಯೇ ಅಂತಿಮ. ವರದಿ ಬಂದ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.